ಸಾಲ ಮರುಪಾವತಿಸುವಂತೆ ಕಿರುಕುಳ: ಪ್ರಕರಣ ದಾಖಲು

ಬೈಂದೂರು, ಮಾ.1: ಸಾಲದ ಕಂತು ಪಾವತಿಸುವಂತೆ ಮನೆಯೊಳಗೆ ಅಕ್ರಮ ಪ್ರವೇಶಿಸಿ ಅವಾಚ್ಯವಾಗಿ ಬೈದು ಅವಮಾನಿಸಿರುವ ಬಗ್ಗೆ ಸೊಸೈಟಿಯ ಸಿಬ್ಬಂದಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಮೈಕ್ರೋ ಲೋನ್ ಆ್ಯಂಡ್ ಸ್ಮಾಲ್ ಲೋನ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
ಬಿಜೂರು ಗ್ರಾಮದ ಕಮಲಾಕ್ಷಿ(39) ಎಂಬವರು ಸೇಫ್‌ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಬೈಂದೂರು ಶಾಖೆಯಿಂದ 40000ರೂ. ಸಾಲವನ್ನು ಪಡೆದುಕೊಂಡಿದ್ದು ಇತ್ತೀಚೆಗೆ ಸಾಲದ ಕಂತು ಕಟ್ಟಲು ಕಷ್ಟ ಸಾಧ್ಯವಾಗಿತ್ತು. ಇದರಿಂದ ಯೋಗೀಶ್, ಮ್ಯಾನೇಜರ್, ಜನಾರ್ದನ್, ಸುಜಾತ ಎಂಬವರು ಪದೇ ಪದೇ ಮನೆಗೆ ಬಂದು ಸಾಲದ ಕಂತು ಕಟ್ಟುವಂತೆ ಪೀಡಿಸುತ್ತಿದ್ದರೆಂದು ದೂರಲಾಗಿದೆ.
ಫೆ.28ರಂದು ಬೆಳಿಗ್ಗೆ ಕಮಲಾಕ್ಷಿ ಅವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಹಣವನ್ನು ಈಗಲೇ ತುಂಬುವಂತೆ ಬಲವಂತಪಡಿಸಿ ಅವಾಚ್ಯವಾಗಿ ಬೈದು ಅವಮಾನಿಸಿರುವುದಾಗಿ ದೂರಲಾಗಿದೆ.
Next Story





