ಉಡುಪಿ: ವಾರೆಂಟ್ ಆರೋಪಿ ವಿಚಾರಣೆ ವೇಳೆ ಪರಾರಿ

ಉಡುಪಿ, ಮಾ.1: ನ್ಯಾಯಾಲಯದ ವಿಚಾರಣೆ ವೇಳೆ ವಾರೆಂಟ್ ಆರೋಪಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಫೆ.27ರಂದು ಬೆಳಗ್ಗೆ ಉಡುಪಿ ಕೋರ್ಟ್‌ನಲ್ಲಿ ನಡೆದಿದೆ.
ನ್ಯಾಯಾಲಯದ ವಾರೆಂಟ್ ಅಶೋಕ ಎಂಬಾತನನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬೈಲೀಫ್ ಸಂಪತ್ ಎಂಬವರು ನಂದಕಿಶೋರ್ ಎಂಬವರೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ವಿಚಾರಣೆಯ ವೇಳೆ ಅಶೋಕ ಕೈ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





