ನಕಲಿ ಅರ್ಜಿ ಕೇಂದ್ರಕ್ಕೆ ದಾಳಿ: ಸೊತ್ತು ವಶ
ಕುಂದಾಪುರ, ಮಾ.1: ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಸ್ಟ್ಯಾಂಪ್ ಹಾಕಿ ನಕಲಿ ಸರಕಾರಿ ಅಧಿಕಾರಿಯವರ ಸಹಿ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ನಕಲಿ ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕುಂದಾಪುರ ಎಸ್ಸೈ ನಂಜಾನಾಯ್ಕ, ಕುಂದಾಪುರ ಫೆರಿ ರಸ್ತೆಯಲ್ಲಿರುವ ಕೋಡಿ ನಾಗೇಶ್ ಎಂಬಾತನ ಅರ್ಜಿ ಕೇಂದ್ರಕ್ಕೆ ಫೆ.28ರಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಟೇಬಲ್ ಡ್ರಾವರ್‌ನಲ್ಲಿ ಬೈಂದೂರು ಉಪನೋಂದಣಾಧಿಕಾರಿ ಗಳ, ಕುಂದಾಪುರ ತಾಲೂಕು ಆಸ್ಪತ್ರೆಯ ಜನನ ಮತ್ತು ಮರಣ, ಬೀಜಾಡಿ, ಬಸ್ರೂರು ಗ್ರಾಪಂ ಕಾರ್ಯಾಲಯ, ಜಿಲ್ಲಾಧಿಕಾರಿಗಳ ಕಛೇರಿ, ಉಡುಪಿ ನಗರಸಭೆ, ಕುಂದಾಪುರ ತಹಶೀಲ್ದಾರರು, ಬಸ್ರೂರು ಗ್ರಾಪಂ ಅಧ್ಯಕ್ಷರು, ನಾವುಂದ, ಮುದೂರು ಸರಕಾರಿ ಶಾಲಾ ಮುಖ್ಯೋಪಾಧ್ಯಾಯರು, ಗೋಪಾಡಿ ಪಿಡಿಓ, ಲೋಕೋಪಯೋಗಿ ಇಲಾಖೆ, ಶಿಕ್ಷಣ ಭಾರತಿ ಕ್ರೆಡಿಟ್ ಸಹಕಾರ ಸಂಘ, ಉಡುಪಿ ಜಿಲ್ಲಾ ಉಪ ತಹಶೀಲ್ದಾರರು, ಭೂ ಮಾಪಕರು ಕುಂದಾಪುರ, ಮದುವೆ ಆಫೀಸರು ಕುಂದಾಪುರ ಇವರ ಹೆಸರಿನ ನಕಲಿ ಸೀಲುಗಳು, ರಬ್ಬರ್ ಸ್ಟ್ಯಾಂಪ್‌ಗಳನ್ನು ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





