ಎಂ.ಸಿ.ಸಿ ಬ್ಯಾಂಕ್ ಬೆಳ್ಮಣ್ ಶಾಖೆ ಉದ್ಘಾಟನಾ ಸಮಾರಂಭ

ಕಾರ್ಕಳ: ಗ್ರಾಹಕರಿಗೆ ಒಳ್ಳೆಯ ಸೇವೆ ದೊರಕಿದ ಪರಿಣಾಮ ಬ್ಯಾಂಕ್ ಬೆಳೆಯುತ್ತಿದೆ. ಸೇವಾ ಮನೋಭಾವದಲ್ಲಿ ಕರ್ತವ್ಯವನ್ನು ಮಾಡಿದಾಗ ದೇವರ ಆಶಿರ್ವಾದ ಇರುತ್ತದೆ ಎಂದು ಬೆಳ್ಮಣ್ ಸಂತ ಜೋಸೆಫರ ಚರ್ಚ್ ನ ಧರ್ಮಗುರು ವಂ| ಫಾ| ಫ್ರೆಡ್ರಿಕ್ ಮಸ್ಕರೇನಸ್ ಹೇಳಿದರು.
ಅವರು ಎಂ.ಸಿ.ಸಿ ಬ್ಯಾಂಕ್ ನ ಬೆಳ್ಮಣ್ ಶಾಖೆಯನ್ನು ಉದ್ಘಾಟನಾ ಸಮಾರಂಭದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ 19ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಎಂದರೆ ವಿಶ್ವಾಸ. ರಾಷ್ಟ್ರೀಕೃತ ಬ್ಯಾಂಕ್ ಗೆ ಪೈಪೋಟಿ ನೀಡುವ ರೀತಿಯಲ್ಲಿ ಬೆಳೆವಣಿಗೆ ಪಡೆದಿದೆ ಎಂದು ಹೇಳಿದರು.
ದೇವ್ ದೀತಾ ವೃದ್ಧಾಶ್ರಮ ಹಾಗೂ ಹ್ಯೂಮನಿಟಿ ಸಂಸ್ಥೆಗಳಿಗೆ ಸಹಾಯಧನವನ್ನು ವಿತರಿಸಲಾಯಿತು.
ಸನ್ಮಾನ : ಯೋಗಪಟು ಹಾಗು ಚಿತ್ರಕಲಾವಿದ ಮಾ.ಉದ್ಭವ ದೇವಾಡಿಗ ಹ್ಯೂಮಾನಿಟಿ ಟ್ರಸ್ಟಿ ನವೀನ್ ಶೆಣೈ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ, ಸಮಾಜ ಸೇವಕಿ ರೆಮಿಡಿಯಾ ಡಿಸೋಜಾ ಬೆಳ್ಮಣ್, ರಾಜಕೀಯ ಜಿತೇಂದ್ರ ಫುಟಾಡೋ ಪಲಿಮಾರು.
ಮುಖ್ಯ ಅತಿಥಿಗಳಾಗಿ ದೈಜಿ ವರ್ಡ್ ಮೀಡಿಯಾ ಪ್ರೈ. ಲಿ.ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬೆಳ್ಳಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಮೇಶ್ವರಿ ಎಮ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೋನ್ ರೊಡ್ರಿಗಸ್, ಜನರಲ್ ಮ್ಯಾನೇಜರ್ ಸುನೀಲ್ ಮೆನೆಜಸ್, ಶಾಖಾ ಪ್ರಬಂಧಕಿ ಶೈನಿ ಲಸ್ಸದ್ರೋ ವಂದಿಸಿದರು.
ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವ ಸ್ವಾಗತಿಸಿರು, ಹೆಲ್ಸನ್ ಹೀರ್ಗಾನ ಕಾರ್ಯಕ್ರಮ ನಿರೂಪಿಸಿದರು.







