ಸಾಲಕ್ಕಾಗಿ ಫೈನಾನ್ಸ್‌ನಿಂದ ಕಿರುಕುಳ: ಪ್ರಕರಣ ದಾಖಲು

ಉಡುಪಿ, ಮಾ.2: ಸಾಲದ ಹಣ ಪಾವತಿಸುವಂತೆ ಮನೆಗೆ ನುಗ್ಗಿ ಕಿರುಕುಳ ನೀಡಿ ಬೆದರಿಕೆ ಹಾಕಿದ ಸುರತ್ಕಲ್‌ನ ಸಾನಿಧ್ಯ ಫೈನಾನ್ಸ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶದಡಿ ಪ್ರಕರಣ ದಾಖಲಾಗಿದೆ.
ಕೊರಂಗ್ರಪಾಡಿ ಬೈಲೂರಿನ ಶಂಶಾದ್ (53) ಹಾಗೂ ಅವರ ಮಗಳಾದ ಶಹನಾಝ್ ಸಾನಿಧ್ಯ ಫೈನಾನ್ಸ್‌ನಿಂದ ತಲಾ 30,000ರೂ. ಸಾಲ ಪಡೆದು ಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿರದ ಕಾರಣ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟದೇ ಬಾಕಿ ಇತ್ತೆನ್ನ ಲಾಗಿದೆ.
ಇದೇ ವಿಚಾರವಾಗಿ ಫೈನಾನ್ಸ್‌ರವರು ಮನೆಗೆ ಬಂದು ಸಾಲದ ಕಂತಿನ ಹಣವನ್ನು ಚಕ್ರಬಡ್ಡಿ ಜೊತೆ ಮರುಪಾವತಿ ಮಾಡು ವಂತೆ ಪೀಡಿಸುತ್ತಿದ್ದು, ಫೆ.25ರಂದು ಮಧ್ಯಾಹ್ನ ಫೈನಾನ್ಸ್‌ನ ಸಿಬ್ಬಂದಿಯು ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
Next Story





