ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರಕ್ಕೆ ಎಂಪಿಎಲ್ ಟ್ರೋಫಿ

ಬ್ರಹ್ಮಾವರ, ಮಾ.5: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಬ್ರಹ್ಮಾವರ ಆಶ್ರಯದಲ್ಲಿ ದಿ.ಪ್ರಭಾಕರ ಆಚಾರ್ಯ ಸ್ಮರಣಾರ್ಥ ನಡೆದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಮಟಪಾಡಿ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ತನ್ನದಾಗಿಸಿ ಕೊಂಡಿತು. ಫ್ರೆಂಡ್ಸ್ ಮಟಪಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.
ಪಂದ್ಯಾಟದಲ್ಲಿ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು, ಸರಣಿ ಶ್ರೇಷ್ಠ ರಾಘವೇಂದ್ರ ಪೂಜಾರಿ, ಪಂದ್ಯ ಶ್ರೇಷ್ಠರಾಗಿ ಶ್ರೀಕಾಂತ್, ಉತ್ತಮ ದಾಂಡಿಗನಾಗಿ ಪ್ರದೀಪ್ ಶೆಟ್ಟಿ, ಉತ್ತಮ ಎಸೆತಗಾರಾಗಿ ಅಜಿತ್, ಉತ್ತಮ ಕ್ಷೇತ್ರ ರಕ್ಷಕರಾಗಿ ಸುದರ್ಶನ್, ಉತ್ತಮ ಗೂಟರಕ್ಷಕರಾಗಿ ಅಂಕುಶ್ ಪ್ರಶಸ್ತಿಯನ್ನು ಪಡೆದರು. ಸೆಮಿಫೈನಲ್ ಪ್ರವೇಶಿಸಿದ ಸಿಎಫ್ ಸಿ ಚಾಂತಾರು ಮತ್ತು ಕುಂಜಾಲು ಸ್ಟ್ರೈಕರ್ಸ್ ತಂಡಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯಾಟವನ್ನು ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ಅರುಣ್ ನಾಯಕ್, ರಾಜ್ಯ ಮಟ್ಟದ ಕ್ರಿಕೆಟ್ ವೀಕ್ಷಕ ವಿವರಣೆಗಾರರಾದ ರಾಘವೇಂದ್ರ ಆಚಾರ್ಯ ಮತ್ತು ಪತ್ರಕರ್ತ ಚೇತನ್ ಜಿ.ಪೂಜಾರಿ ಮಟಪಾಡಿ ಅವರನ್ನು ಸನ್ಮಾನಿಸಲಾಯಿತು. ದಿ.ಪ್ರಭಾಕರ ಆಚಾರ್ಯ ಕುಟುಂಬಿಕರಿಗೆ ಗೌರವಾರ್ಪಣೆ ನಡೆಸಲಾಯಿತು.
ವೇದಿಕೆಯಲ್ಲಿ ಪದ್ಮಾನಾಭ ಆಚಾರ್ಯ, ಅಶೋಕ್ ಪೂಜಾರಿ, ಚಂದ್ರ ಶೇಖರ ನಾಯಕ್, ಅಬ್ದುಲ್ ಸಲೀಮ್, ರಾಜೇಶ್ ಶೆಟ್ಟಿ ಬಿರ್ತಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಚಂದ್ರ ಶೇಖರ ನಾಯರಿ, ವಸಂತಿ ಪ್ರಭಾಕರ ಆಚಾರ್ಯ, ಪ್ರಸನ್ನ, ಸಂದೇಶ್ ಪೂಜಾರಿ, ಸುರೇಶ್ ಎನ್ ಕರ್ಕೇರಾ, ವಿಜಯ ನಾಯಕ್, ಸುಬ್ರಹ್ಮಣ್ಯ ಆಚಾರ್ಯ, ಜೊಯ್ಸನ್ ಬಾಂಜ್, ಗಣಪತಿ ಆಚಾರ್ಯ, ಯೂತ್ ಕ್ಲಬ್ ಅಧ್ಯಕ್ಷ ಶರತ್ ನಾಯಕ್, ಕೋಶಾಧಿಕಾರಿ ಅಖಿಲೇಶ್ ನಾಯಕ್, ಕ್ರೀಡಾ ಕಾರ್ಯದರ್ಶಿ ಮುರಳಿ ನಾಯಕ್, ಭರತ್ ನಾಯಕ್, ಆಸ್ಫಾನ್ ಉಪಸ್ಥಿತರಿದ್ದರು.
ಯೂತ್ ಕ್ಲಬ್ ಅಧ್ಯಕ್ಷ ಶರತ್ ನಾಯಕ್ ಸ್ವಾಗತಿಸಿದರು. ಸನ್ಮಾನಿತರ ಪರಿಚಯವನ್ನು ಶರೋನ್, ಅಂಕುಶ್, ಸುಬ್ರಹ್ಮಣ್ಯ ಆಚಾರ್ಯ ಮಾಡಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







