ಬೆಳ್ಳೆ: ನರೇಗಾ ಯೋಜನೆ ಕುರಿತು ವಿಶೇಷ ಗ್ರಾಮಸಭೆ

ಶಿರ್ವ, ಮಾ.5: 2024-25ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಸೋಮವಾರ ಬೆಳ್ಳೆ ಗ್ರಾಮ ಪಂಚಾಯತ್ ವಠಾರದಲ್ಲಿ ಜರುಗತು.
ಸಭೆಯ ಅಧ್ಯಕ್ಷತೆಯನ್ನು ನೊಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಭಾರತಿ ವಹಿಸಿದ್ದರು. ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳ ಗುಣ ಮಟ್ಟಗಳ ಸಾಮಾಜಿಕ ಪರಿ ಶೋಧನೆಯನ್ನು ನಡೆಸಿದ ಕಾಪು ತಾಲೂಕು ಸಂಯೋಜಕ ರೋಹಿತ್ ಮತ್ತು ಅವರ ತಂಡದವರು ಸದ್ರಿ ಯೋಜನೆಗಳ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಸಮಗ್ರ ಮಾಹಿತಿಯನ್ನು ವರದಿ ಸಹಿತ ಸಭೆಯಲ್ಲಿ ಮಂಡಿಸಿದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಕಾರ್ಯದರ್ಶಿ ಆನಂದ ಕುಲಕರ್ಣಿ, ಲೆಕ್ಕ ಸಹಾಯಕರಾದ ಸದಾನಂದ ಪೂಜಾರಿ, ಗ್ರಾ.ಪಂ. ಸಿಬ್ಬಂಧಿಯವರು ನರೇಗಾ ಯೋಜನೆಯ ತಾಲ್ಲೂಕು ತಾಂತ್ರಿಕ ಅಭಿಯಂತರ ಪವನ್, ನರೇಗಾ ಬಿ.ಎಫ್.ಟಿ ಶಂಕರ್, ಅಂಗನವಾಡಿ ಮತುತಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.





