ಬಜೆಟ್: ಕೊರಗ ಒಕ್ಕೂಟ ಅಭಿನಂದನೆ

ಸಿಎಂ ಸಿದ್ದರಾಮಯ್ಯ
ಉಡುಪಿ, ಮಾ.8: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಮಂಡಿಸಿದ ಬಜೆಟ್ನಲ್ಲಿ ಕೊರಗರು ಒಳಗೊಂಡಂತೆ ಅರಣ್ಯದಂಚಿನ ಬುಡಕಟ್ಟುಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಲು 200 ಕೋಟಿ ಅನುದಾನ ಮತ್ತು ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಯನ್ನು ಕೈಗೊಳ್ಳುವ ಘೋಷಣೆ ಮಾಡಿರುವುದಕ್ಕೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಅಧ್ಯಕ್ಷೆ ಸುಶೀಲ ನಾಡ ಹಾಗೂ ಪ್ರಧಾನ ಕಾರ್ಯದರ್ಶಿ ಶೀಲಾ ಬಂಟ್ವಾಳ ಅಭಿನಂದನೆ ಸಲ್ಲಿಸಿದ್ದಾರೆ.
Next Story





