ಯುವಜನತೆಯಲ್ಲಿ ಮಧುಮೇಹ ಪತ್ತೆ ಆತಂಕಕಾರಿ: ಡಾ.ಶ್ರುತಿ ಬಲ್ಲಾಳ್

ಉಡುಪಿ: ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ, ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನವನ್ನು ರವಿವಾರ ರಾಜಾಂಗಣ ದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಡಾ.ಶ್ರುತಿ ಬಲ್ಲಾಳ ಮಾತನಾಡಿ, ಯುವಜನತೆಯನ್ನು ಮಧುಮೇಹ ಪತ್ತೆಯಾಗುತ್ತಿರುವುದು ಆತಂಕರಾಗಿ ವಿಚಾರ. ಆದುದರಿಂದ ನಿತ್ಯ ವ್ಯಾಯಾಮ, ವಾಕಿಂಗ್, ಯೋಗ ಮಾಡುವುದರ ಜೊತೆಗೆ ಮಹಿಳೆಯರು ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾ ಪುರಸ್ಕಾರದಲ್ಲಿ ಯಕ್ಷಗಾನ ಕಲಾವಿದೆ ಪ್ರೇಮಾ ಮಹೇಶ್ ಅವರನ್ನು ಗೌರವಿಸಲಾಯಿತು. ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಪದ್ಮಾ ರತ್ನಾಕರ್, ಉಪಾಧ್ಯಕ್ಷೆ ಗೀತಾ ವಾಗ್ಲೆ, ಕೋಶಾಧಿಕಾರಿ ರೇವತಿ, ಜಿಲ್ಲಾ ಒಕ್ಕೂಟದ ವಾಸಂತಿ ರಾವ್, ಸುಪ್ರಭಾ ಆಚಾರ್ಯ, ಮಠದ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.
ಸುಷ್ಮಾ ಶಿವರಾಮ ಶೆಟ್ಟಿ ಸ್ವಾಗತಿದರು. ಜ್ಯೋತಿ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಹಾಯ ಮೇರಿ ವಂದಿಸಿದರು. ಒಕ್ಕೂಟದ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು .







