ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಶ್ರೀಧರ ದೇವಾಡಿಗ

ಉಡುಪಿ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀಧರ ಸಿ.ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಸರ್ವಾನುಮ ತದಿಂದ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾದ ವಿಜಯ ಪೂಜಾರಿ ಬೈಲೂರು, ಜಯಕರ ಪೂಜಾರಿ ಕೊರಂಗ್ರಪಾಡಿ, ಐತಪ್ಪ ಆರ್.ಅಮೀನ್ ಮಾರ್ಪಳ್ಳಿ, ರಮಾನಂದ ನಾಯಕ್ ಅಲೆವೂರು, ಅಶೋಕ್ ಕುಮಾರ್ ಅಲೆವೂರು, ರಮಾದೇವಿ ಇಂದಿರಾನಗರ, ಲಕ್ಷ್ಮೀ ಚಂದ್ರಶೇಖರ್ ಇಂದಿರಾ ನಗರ, ಸದಾನಂದ ಶೆಟ್ಟಿ ಕುಕ್ಕಿಕಟ್ಟೆ, ವಿಜಯ ಪಾಲನ್ ಇಂದಿರಾನಗರ, ಕೇಶವ ಕೊರಂಗ್ರಪಾಡಿ ಹಾಗೂ ದಿನೇಶ್ ಸಿ.ನಾಯ್ಕ್ ಅಲೆವೂರು ಪಾಲ್ಗೊಂಡಿದ್ದರು.
ಚುನಾವಣಾಧಿಕಾರಿಯಾಗಿ ಜಯಂತಿ ಎಸ್. ಕಾರ್ಯನಿರ್ವಹಿಸಿದ್ದು, ಸಂಘದ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಮಾರ್ಪಳ್ಳಿ ಸಹಕರಿಸಿದರು.
Next Story





