ಅಕಳಂಕ ಪ್ರಶಸ್ತಿಗೆ ಎನ್.ಟಿ.ಭಟ್ ಆಯ್ಕೆ

ಉಡುಪಿ, ಮಾ.9: ಉಪ್ಪಂಗಳ ರಾಮ ಭಟ್ ಮತ್ತು ಶ್ರೀಮತಿ ಶಂಕರಿ ಆರ್.ಭಟ್ ಅವರ ದತ್ತಿನಿಧಿಯಿಂದ ನೀಡುವ ಅಕಳಂಕ ಪ್ರಶಸ್ತಿಗೆ ಸಾಹಿತಿ, ಭಾಷಾಂತರಕಾರ ಎನ್.ತಿರುಮಲೇಶ್ವರ ಭಟ್ ಆಯ್ಕೆಯಾಗಿದ್ದಾರೆ.
ಎನ್.ತಿರುಮಲೇಶ್ವರ ಭಟ್(ಎನ್.ಟಿ.ಭಟ್) ಭಾಷಾಂತರಕಾರರಾಗಿ ಖ್ಯಾತಿ ಪಡೆದಿದ್ದು, ಅವರಿಗೆ ಕನ್ನಡ ದಿಂದ ಜರ್ಮನ್ ಭಾಷೆಗೆ, ಜರ್ಮನ್ ಭಾಷೆಯಿಂದ ಕನ್ನಡಕ್ಕೆ, ಇಂಗ್ಲಿಷಿನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರ ಮಾಡಿದ ಅನುಭವವಿದೆ. ಜನಪದ ಕಾವ್ಯಗಳು, ಹಳೆಗನ್ನಡ, ಮಲ್ಲಿಕಾರ್ಜುನ ಖರ್ಗೆ(ಜೀವನಚರಿತ್ರೆ), ಪರ್ಣಿಶಾಲೆ, ಮುಖಾಂತರ, ಧರ್ಮಯುದ್ಧ, ಭಾರತಕಥಾ, ನೆನಪೇ ಸಂಗೀತ, ಪಂಪಭಾರತ ಮೊದಲಾದ ಕೃತಿಗಳನ್ನು ಭಾಷಾಂತರ ಮಾಡಿದ್ದಾರೆ.
ಮಾ.23ರಂದು ಅಪರಾಹ್ನ 3ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





