ಲಕ್ಷಾಂತರ ರೂ. ಮೌಲ್ಯದ ಗೇರುಎಣ್ಣೆ ಕಳವು: ಪ್ರಕರಣ ದಾಖಲು

ಬೈಂದೂರು, ಮಾ.9: ಗೇರುಬೀಜ ಎಣ್ಣೆ ಪ್ಯಾಕ್ಟರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಗೇರು ಎಣ್ಣೆಯನ್ನು ಕಳವು ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆನರಾ ಬ್ಯಾಂಕ್‌ನಿಂದ ಹರಾಜು ಮಾಡಲ್ಪಟ್ಟ ಯಳಜಿತ್ ಗೇರುಬೀಜ ಎಣ್ಣೆ ಪ್ಯಾಕ್ಟರಿಯನ್ನು ನಾಗರಾಜ ಎಸ್. ಖರೀದಿಸಿ ಮಾಡಿದ್ದರು. 2024ರ ನ.19ರಂದು ಬೈಂದೂರು ಕೋರ್ಟ್ ಅಮೀನ್ ಮತ್ತು ಬ್ಯಾಂಕಿನ ಸಿಬ್ಬಂದಿ ಯವರು ಈ ಫ್ಯಾಕ್ಟರಿಯಲ್ಲಿದ್ದ ಸೊತ್ತುಗಳ ಸಮೇತ ಮತ್ತು ಫ್ಯಾಕ್ಟರಿ ಜಮೀನನ್ನು ನಾಗರಾಜ್ ಸ್ವಾಧೀನಕ್ಕೆ ನೀಡಿದ್ದರು.
ನಾಗರಾಜ್ ಜ.28ರಂದು ನೋಡುವಾಗ ಫ್ಯಾಕ್ಟರಿಯಲ್ಲಿ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿದ್ದು ಮಾ.5ರಂದು ಸಂಜೆ ಫ್ಯಾಕ್ಟರಿಗೆ ಹೋಗಿ ನೋಡುವಾಗ 210ಕೆ.ಜೆ. ಗೇರು ಎಣ್ಣೆ ತುಂಬಿಸಿಟ್ಟಿದ್ದ 10 ಬ್ಯಾರೆಲ್‌ಗಳು ನಾಪತ್ತೆಯಾಗಿದ್ದವು. ಇವುಗಳನ್ನು ಆರೋಪಿ ಪ್ರಭಾಕರ ಎಂಬಾತ ಕಳವು ಮಾಡಿಕೊಂಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು 190000ರೂ. ಅಂದಾಜಿಸಲಾಗಿದೆ.
Next Story





