ಆತ್ಮವಿಶ್ವಾಸ -ಯಶಸ್ಸಿನ ಕೀಲಿಕೈ ಕುರಿತು ಉಪನ್ಯಾಸ

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಅಂದಗೊಳಿಸುವಿಕೆ ಮತ್ತು ಸ್ವಯಂ ಪ್ರಸ್ತುತಿಯು ಆತ್ಮವಿಶ್ವಾಸ ಮತ್ತು ಯಶಸ್ಸಿನ ಕೀಲಿಕೈ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಟ್ರಸ್ಟ್ ಅಕಾಡೆಮಿ ಮಂಗಳೂರು ಸಂಸ್ಥಾಪಕ ಕಾರ್ತಿಕ್ ಆಳ್ವ, ಸ್ವಯಂ ಪ್ರಸ್ತುತಿಯು ಮೂರು ಪ್ರಮುಖ ಅಂಶಗಳಾದ ಹೇಗೆ ಕಾಣುತ್ತೇವೆ, ಹೇಗೆ ಮಾತನಾಡುತ್ತೇವೆ ಮತ್ತು ನಮ್ಮನ್ನು ಹೇಗೆ ಪರಿಚಯಿಸಿ ಕೊಳ್ಳುತ್ತೇವೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ನಿರ್ದೇಶಕ ಡಾ.ಸೂರಜ್ ಫ್ರಾನ್ಸಿಸ್ ನೊರೋಹ್ನ, ಎಂಬಿಎ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story





