ಟ್ಯಾಂಕರ್‌ನಿಂದ ಡಿಸೇಲ್ ಕಳವು ಜಾಲ: ಇಬ್ಬರ ಬಂಧನ
ಶಂಕರನಾರಾಯಣ, ಮಾ.11: ಟ್ಯಾಂಕರ್‌ನಿಂದ ಡಿಸೇಲ್ ಕಳವು ಮಾಡುತ್ತಿದ್ದ ಜಾಲವೊಂದನ್ನು ಶಂಕರ ನಾರಾಯಣ ಪೊಲೀಸರು ಬೇಧಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಮಾ.10ರಂದು ರಾತ್ರಿ ಸಿದ್ದಾಪುರ ಗ್ರಾಮದ ಸುಬ್ಬರಾವ್ ಕಾಂಪ್ಲೇಕ್ಷನಲ್ಲಿರುವ ಸರ್ವಿಸ್ ಸ್ಟೇಷನ್‌ನಲ್ಲಿ ಡಿಸೇಲ್ ಟ್ಯಾಂಕರ್‌ಗಳಿಂದ ಅಕ್ರಮವಾಗಿ ಡಿಸೇಲನ್ನು ಕ್ಯಾನಗಳಿಗೆ ವರ್ಗಾ ಯಿಸಿ ಕಳ್ಳತನ ಮಾಡುತ್ತಿರುವ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಡಿಸೇಲ್ ಕಳವು ಮಾಡುತ್ತಿದ್ದ ಜಯರಾಮ ಎಂಬಾತನನ್ನು ವಶಕ್ಕೆ ಪಡೆದರು.
ಬಳಿಕ ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಪ್ರತಿ ಡಿಸೇಲ್ ಟ್ಯಾಂಕನಿಂದ 20 ಲೀಟರ್ ಡಿಸೇಲನ್ನು ಕಳವು ಮಾಡಿ ಸಿದ್ದಾಪುರದ ವಿಜಯ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿ ವಿಜಯ ಎಂಬಾತ ಓಡಿ ತಪ್ಪಿಸಿಕೊಂಡಿದ್ದಾನೆ.
ಈ ಸಂಬಂಧ 1020 ಲೀಟರ್ ಡಿಸೇಲ್, 30 ಲೀಟರ್ ಪೆಟ್ರೋಲ್, 3 ಪೈಪ್‌ಗಳು, ಹಾಗೂ ಒಂದು ಡಿಸೇಲ್ ತೆಗೆಯುವ ಲಿಪ್ಟ್ ಮೋಟಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





