ಮನೆಗೆ ನುಗ್ಗಿ ಸೊತ್ತು ಕಳವು: ಪ್ರಕರಣ ದಾಖಲು

ಬೈಂದೂರು, ಮಾ.11: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಾ.10ರಂದು ರಾತ್ರಿ ನಡೆದಿದೆ.
ಉಪ್ಪುಂದ ಗ್ರಾಮದ ಜನಾರ್ಧನ ಎಂಬವರು ಕುಟುಂಬ ಸಮೇತ ಯಕ್ಷಗಾನ ನೋಡಲು ಮನೆಗೆ ಬೀಗ ಹಾಕಿ ಹೋಗಿದ್ದು, ಈ ವೇಳೆ ಮನೆ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಲ್ಯಾಪ್‌ಟಾಪ್, ಬೆಳ್ಳಿಯ ಕಾಲಗೆಜ್ಜೆ, ಬೆಳ್ಳಿ ದೀಪ, ಬೆಳ್ಳಿ ಸರ, ಬೆಳ್ಳಿ ಕಿವಿ ಸ್ಟಾರ್ ಹಾಗೂ ಸುಮಾರು 15000ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 46000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





