ಕೊಂಕಣ ರೈಲ್ವೆ: ಕುಂದಾಪುರ, ಕುಮಟಾಗಳಲ್ಲಿ ತಾತ್ಕಾಲಿಕ ನಿಲುಗಡೆ

ಉಡುಪಿ, ಮಾ.13: ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಕೆಲವು ಸಾಪ್ತಾಹಿಕ ರೈಲುಗಳಿಗೆ ಕುಮಟಾ ಹಾಗೂ ಕುಂದಾಪುರ ರೈಲ್ವೆ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಕುಂದಾಪುರದಲ್ಲಿ: ರೈಲು ನಂ. 22653 ತಿರುವನಂತಪುರ ಸೆಂಟ್ರಲ್- ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ಮಾ.15ರ ಶನಿವಾರ ಅಪರಾಹ್ನ 2:06ರಿಂದ 2:08ರವರೆಗೆ, ರೈಲು ನಂ.22654 ನಿಝಾಮುದ್ದೀನ್- ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್‌ಗೆ ಮಾ.18ರ ಮಂಗಳವಾರ ಅಪರಾಹ್ನ 1:28ರಿಂದ 1:30ರವರೆಗೆ.
ರೈಲು ನಂ.22655 ಎರ್ನಾಕುಲಂ ಜಂಕ್ಷನ್-ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ಮಾ.19ರ ಬುಧವಾರ ಅಪರಾಹ್ನ 2:06ರಿಂದ 2:08 ರವರೆಗೆ ಹಾಗೂ ರೈಲು ನಂ.22656 ನಿಝಾಮುದ್ದೀನ್- ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್‌ಗೆ ಮಾ.15ರ ಶನಿವಾರ ಅಪರಾಹ್ನ 1:28ರಿಂದ 1:30ರವರೆಗೆ ನಿಲುಗಡೆ ಇರುತ್ತದೆ.
ಕುಮಟಾದಲ್ಲಿ: ರೈಲು ನಂ.22476 ಕೊಯಮತ್ತೂರು-ಹಿಸ್ಸಾರ್ ಎಕ್ಸ್‌ಪ್ರೆಸ್‌ಗೆ ಮಾ.16ರ ರವಿವಾರ ಮುಂಜಾನೆ 1:46ರಿಂದ 1:48ರವರೆಗೆ ಹಾಗೂ ರೈಲು ನಂ.22475 ಹಿಸ್ಸಾರ್- ಕೊಯಮತ್ತೂರು ಎಕ್ಸ್‌ಪ್ರೆಸ್‌ಗೆ ಮಾ.21ರ ಶುಕ್ರವಾರ ಮುಂಜಾನೆ 2:10ರಿಂದ 2:12ರವರೆಗೆ ನಿಲುಗಡೆ ಇರುತ್ತದೆ.