ಕುಂದಾಪುರದಲ್ಲಿ ಹೋಳಿ ಹಬ್ಬದ ಸಂಭ್ರಮ

ಕುಂದಾಪುರ, ಮಾ.15: ಕುಂದಾಪುರ ಕೊಂಕಣಿ ಖಾರ್ವಿ ಸಮುದಾಯದ ಹೋಳಿ ಮೆರವಣಿಗೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.
ಹೋಳಿ ಹಬ್ಬದ ಕೊನೆಯ ದಿನವಾದ ಶನಿವಾರ ಬೆಳಿಗ್ಗೆ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಲ್ಲಿ ಹೋಳಿ ಬಣ್ಣದ ಪೂಜೆ ನೆರವೇರಿತು. ಸಂಜೆ ನಡೆದ ಹೋಳಿಯ ಓಕುಳಿ ಮೆರವಣಿಗೆಯಲ್ಲಿ ಯುವಕ-ಯುವತಿಯರು, ಹಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸ್ತಬ್ಧಚಿತ್ರಗಳು ಹಾಗೂ ಆಕರ್ಷಕ ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆ ಕುಂದಾಪುರ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕೆಲವು ವಿದೇಶಿಗರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Next Story





