ತಡರಾತ್ರಿವರೆಗೆ ಡಿಜೆ: ಪ್ರಕರಣ ದಾಖಲು

ಹೆಬ್ರಿ, ಮಾ.17: ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೆ ಕರ್ಕಶವಾಗಿ ಡಿಜೆ ಹಾಕಿ ಸಾರ್ವಜನಿಕರ ನೆಮ್ಮದಿ ಭಂಗ ಉಂಟು ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.15ರಂದು ರಾತ್ರಿ ಬೆಳಂಜೆ ಗ್ರಾಮದ ಈಶ್ವರ ನಗರ ಎಂಬಲ್ಲಿ ಕೃಷ್ಣ ಮೂರ್ತಿ ಎಂಬವರ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಇಲ್ಲದೆ ಬೆಳಂಜೆ ಗ್ರಾಮದ ಈಶ್ವರ ಎಂಬವರ ಸಾಯಿ ಸೌಂಡ್ಸ್‌ನವರು ತಡರಾತ್ರಿವರಗೆ ಕರ್ಕಶವಾದ ಡಿಜೆ ಹಾಕಿ ಸಾರ್ವಜನಿಕರಿಗೆ ನೆಮ್ಮದಿಗೆ ಭಂಗ ಉಂಟು ಮಾಡಿರುವುದಾಗಿ ದೂರಲಾಗಿದೆ.
Next Story





