ಚೇರ್ಕಾಡಿ ಗ್ರಾಪಂ ಬರ್ಖಾಸ್ತುಗೊಳಿಸಲು ಆಗ್ರಹಿಸಿ ಧರಣಿ

ಬ್ರಹ್ಮಾವರ, ಮಾ.21: ಜನವಿರೋಧಿ ನೀತಿ ಅನುಸರಿಸುತ್ತಿರುವ ಚೇರ್ಕಾಡಿ ಗ್ರಾಮ ಪಂಚಾಯತ್ ಬರ್ಖಾಸ್ತುಗೊಳಿಸುವಂತೆ ಆಗ್ರಹಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಳ ಉಡುಪಿ ವತಿಯಿಂದ ಮಾ.19ರಂದು ಗ್ರಾಪಂ ಎದುರು ಧರಣಿ ನಡೆಸಲಾಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದವರಿಗೆ ನೀಡ ಬೇಕಾದ ಸೌಲಭ್ಯವನ್ನು ನೀಡದೆ ವಂಚಿಸಿ ದೌರ್ಜನ್ಯ ಎಸಗಿರುವ ಪಿಡಿಒ ಅಮಾನತು ಮಾಡಬೇಕು. ಅನುದಾನ ಅವ್ಯವಹಾರ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಜಿಲ್ಲಾ ಕೋಶಾಧಿಕಾರಿ ಸತೀಶ್ ಜನ್ನಾಡಿ, ಮುಖಂಡರಾದ ರಮೇಶ್ ಕೋಟ್ಯಾನ್, ಸತೀಶ್ ಹೈಕಾಡಿ, ಸಂತೋಷ್, ಗೋವಿಂದ, ಗೌರಿ ನಡ್ಕೇರಿ, ಹರೀಶ್ ಸುರ್ಗೋಳಿ, ಲಕ್ಷ್ಮಿ ರಂಗನಕೆರೆ, ಎ.ಕೆ.ಸುಧೀರ್, ವೆಂಕಟೇಶ್ ಆರ್ಡಿ, ಅಶ್ವಿನಿ, ಚಂದ್ರ ಸೂರ್ಗೋಳಿ ಮೊದಲಾದವರು ಉಪಸ್ಥಿತರಿದ್ದರು.







