ಮಾಳ: ಸಿಡಿಲಿಗೆ ಮನೆ ಹಾನಿ

ಉಡುಪಿ, ಮಾ.21: ಕಾರ್ಕಳ ತಾಲೂಕಿನಾದ್ಯಂತ ಗುರುವಾರ ಸಂಜೆ ವೇಳೆ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಸಿಡಿಲು ಬಡಿದು ಮಾಳ ಗ್ರಾಮದ ಸುಧಾಕರ ಮೇರಾ ಎಂಬವರ ವಾಸದ ಮನೆಗೆ ಭಾಗಶ: ಹಾನಿಯಾಗಿದೆ. ಸುಮಾರು 20,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನಲ್ಲಿ ಗುರುವಾರ ಸುಮಾರು ಆರು ಮಿ.ಮೀ. ಮಳೆಯಾಗಿದೆ. ಉಳಿದಂತೆ ಕುಂದಾಪುರ ಹಾಗೂ ಹೆಬ್ರಿ ತಾಲೂಕಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.
ಕಳೆದ ಹಲವು ಸಮಯದಿಂದ ಬಿಸಿಲಿನ ತಾಪದಿಂದ ಬಸವಳಿದಿದ್ದ ಕಾರ್ಕಳದ ಜನತೆಗೆ ತಂಪಿನ ಸಿಂಚನ ವಾಯಿತು. ಬಜಗೋಳಿ, ಹೊಸ್ಮಾರು, ಮಾಳ, ಮಿಯಾರು, ನೆಲ್ಲಿಕಾರು ಆಸುಪಾಸಿನಲ್ಲಿ ಒಳ್ಳೆಯ ಮಳೆ ಸುರಿದಿದೆ.
ಕರಾವಳಿಯಲ್ಲಿ ಮಳೆಯ ಸಾಧ್ಯತೆ: ರಾಜ್ಯ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಮಾ.22ರಿಂದ 25ರವರೆಗೆ ಗುಡುಗು, ಸಿಡಿಲಿನ ಸಹಿತ ಗಾಳಿ-ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯನ್ನು ಉಲ್ಲೇಖಿಸಿ ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.
Next Story





