ಉಡುಪಿ: ಅಜ್ಜರಕಾಡು ಮಹಿಳಾ ಕಾಲೇಜಿಗೆ ನಾಲ್ಕು ರ್ಯಾಂಕ್ ಗಳು

ಶ್ರೇಯಾ, ಮೆಲಿಸಾ ಡಿಸಾ, ಪ್ರತೀಕ್ಷಾ, ವರ್ಷಿಣಿ
ಉಡುಪಿ, ಎ.11: 2023-24ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯ ನಡೆಸಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ನಾಲ್ಕು ರ್ಯಾಂಕ್ ಗಳನ್ನು ಪಡೆದಿದೆ.
ಬಿಸಿಎಯಲ್ಲಿ ಪ್ರತೀಕ್ಷಾ ಹಾಗೂ ವರ್ಷಿಣಿ ಏಳನೇ ರ್ಯಾಂಕ್ ಗಳಿಸಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. (ರಸಾಯನಶಾಸ್ತ್ರ)ದಲ್ಲಿ ಮೆಲಿಷಾ ಡಿ ಸಾ ದ್ವಿತೀಯ ರ್ಯಾಂಕ್, ಎಂಕಾಂನಲ್ಲಿ ಶ್ರೇಯಾ ಏಳನೇ ರ್ಯಾಂಕ್ ಗಳಿಸಿದ್ದಾರೆ. ಎಂ.ಎಸ್ಸಿ ಗಣಿತಶಾಸ್ತ್ರದಲ್ಲಿ 2ನೇ ಸ್ಥಾನ ಪಡೆದ ಅನುಷಾ, ರಾಮಾನುಜನ್ ನಗದು ಪುರಸ್ಕಾರಕ್ಕೆ ಹಾಗೂ ಅಪೇಕ್ಷಾ ಪೂಜಾರಿ ಎಂ.ಎ ರಾಜ್ಯಶಾಸ್ತ್ರದಲ್ಲಿ ದ್ವಿತೀಯ ಸ್ಥಾನ ಪಡೆದು ಸಿಪ್ರಿಯನ್ ಕಾರ್ಮೆಲ್ಲೋ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ ಪ್ರಸಾದ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





