ಕೋಳಿ ಅಂಕ: ಇಬ್ಬರ ಬಂಧನ

ಶಂಕರನಾರಾಯಣ, ಎ.17: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ಆಜ್ರಿ ಗ್ರಾಮದ ಬಾಂಡ್ಯ ಹೊಳೆಕಡು ಎಂಬಲ್ಲಿ ಎ.17ರಂದು ಸಂಜೆ ವೇಳೆ ನಡೆದಿದೆ.
ಸುಧೀರ್, ಸುಧಾಕರ ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಅಶೋಕ್, ಭಾಸ್ಕರ್, ಪ್ರಸಾದ, ಅರುಣ್, ಅರುಣ ನೀರ್ಜಡ್ಡು, ಬುಟ್ಟಿ ಭಾಸ್ಕರ, ಗುಂಡು ಎಂಬವರು ಪರಾರಿಯಾಗಿದ್ದಾರೆ.
ಬಂಧಿತರಿಂದ ಮೂರು ಕೋಳಿ ಹುಂಜ, 4 ಕೋಳಿ ಕತ್ತಿ(ಬಾಳು), 1,120 ರೂ. ನಗದು, ಎರಡು ಮೊಬೈಲು ಸೇರಿದಂತೆ ಒಟ್ಟು 11,620ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾ ಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





