ಹಿರಿಯ ನಾಗರಿಕರಿಗೆ ಮನೆಯೇ ಗ್ರಂಥಾಲಯ ಅಭಿಯಾನ

ಉಡುಪಿ, ಎ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಮನೆಯೇ ಗ್ರಂಥಾಲಯ ಅಭಿಯಾನ ಹಿರಿಯ ನಾಗರಿಕ ವೇದಿಕೆ ಕಚೇರಿಯಲ್ಲಿ ಎ.22ರಂದು ಮಂಗಳವಾರ ಅನುಷ್ಠಾನಗೊಳಿಸಲಾಯಿತು.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪಿ.ನಾಗರಾಜ ರಾವ್ ಮಾತನಾಡಿ, ಪುಸ್ತಕ ನಮ್ಮ ಅತ್ಯುತ್ತಮ ಮಿತ್ರ. ಪುಸ್ತಕಗಳನ್ನು ಓದುವುದರಿಂದ ನಮ್ಮ ಸಮಯವನ್ನು ಕ್ರಿಯಾಶೀಲವಾಗಿ ಕಳೆಯಬಹುದಾಗಿದೆ. ಅಲ್ಲದೆ ಸಾಕಷ್ಟು ಜ್ಞಾನ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಹಿರಿಯ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ, ಉಪಾಧ್ಯಕ್ಷ ಕೆ.ಮುರಳೀಧರ, ಕಾರ್ಯದರ್ಶಿ ನಂದಕುಮಾರ್, ಕೋಶಾಧಿಕಾರಿ ಉಮೇಶ್ ರಾವ್, ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎಚ್.ವಿಶ್ವನಾಥ್ ಹೆಗ್ಡೆ, ಹಿರಿಯ ಸದಸ್ಯ ಸಿ.ಎಸ್.ರಾವ್. ಮೊದಲಾದವರು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.





