ಕುಂದಾಪುರ ಚರ್ಚ್‌ನಲ್ಲಿ ಅಧ್ಯಾತ್ಮಿಕ ಶಿಬಿರಕ್ಕೆ ಚಾಲನೆ

ಕುಂದಾಪುರ, ಎ.22: ಕುಂದಾಪುರ ರೋಜರಿ ಮಾತಾ ಚರ್ಚ್‌ನಲ್ಲಿ ಕ್ರೈಸ್ತ ಶಿಕ್ಷಣ ಆಯೋಗದ ಸಹಕಾರ ದಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಬೇಸಿಗೆ ರಜೆಯ ಅಧ್ಯಾತ್ಮಿಕ ಶಿಬಿರಕ್ಕೆ ಎ.21ರಂದು ಚರ್ಚ್ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಚರ್ಚ್ ಧರ್ಮಗುರು ವಂ.ಪೌಲ್ ರೇಗೊ ಮಾತನಾಡಿ, ಈ ಶಿಬಿರದಲ್ಲಿ ಆಟ ಪಾಠಗಳ ಜೊತೆ, ಮಕ್ಕಳಲ್ಲಿ ಅಧ್ಯಾತ್ಮಿಕ ಜ್ಞಾನ ಬೆಳಗಲು ಪ್ರಯತ್ನಿಸಲಾಗುವುದು. ಈ ಪ್ರಾಯದಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯಿದೆ. ಮಕ್ಕಳು ಅನೀತಿಗಳಿಂದ ದೂರವಿರಲು ಇಂತಹ ಶಿಬಿರಗಳು ಸಹಾಯಕವಾಗುತ್ತವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬಾಲ್ಯ ಮೇರಿ ಮಾತಾ ಸೊಡೆಲಿಟಿಯ ಸಚೇತಕಿ ಸಿಸ್ಟರ್ ಇವ್ಲಾ, ಚರ್ಚ್‌ನ ಪಾಲನ ಮಂಡಳಿ ಉಪಾಧ್ಯಕ್ಷೆ, ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವೆಲ್ಲೊ, ಸರ್ವ ಅಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಿಕ್ಷಕಿ ಸೆಲಿನ್ ಬಾರೆಟ್ಟೊ ಉಪಸ್ಥಿತರಿದ್ದರು. ಕ್ರೈಸ್ತ ಶಿಕ್ಷಣ ಆಯೋಗದ ಸಂಚಾಲಕಿ ವೀಣಾ ಡಿಸೋಜ ಸ್ವಾಗತಿಸಿದರು.
Next Story





