ಉಡುಪಿ: ಗ್ರಾಪಂ ಉಪಚುನಾವಣೆ ಮುಂದೂಡಿಕೆ

ಉಡುಪಿ, ಎ.22: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್‌ಗಳ ಖಾಲಿ ಸ್ಥಾನಗಳಿಗೆ ನಡೆಸಲುದ್ದೇಶಿಸಿದ್ದ ಉಪ ಚುನಾವಣೆ ಯನ್ನು ಮುಂದೂಡಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.
ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಇತರೆ ಸಮಸ್ಯೆಗಳ ಕಾರಣಗಳಿಗಾಗಿ ರಾಜ್ಯ ಚುನಾವಣಾ ಆಯೋ ಗವು 15 ದಿನಗಳ ಮಟ್ಟಿಗೆ ಚುನಾವಣೆಯನ್ನು ಮುಂದೂಡಿ ಆದೇಶ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯ 3 ಗ್ರಾಪಂಗಳ ತಲಾ ಒಂದು ಸದಸ್ಯ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಿಕೆ ಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
Next Story





