ಬೈಕ್ ಸ್ಕಿಡ್: ಸವಾರ ಮೃತ್ಯು

ಕುಂದಾಪುರ, ಎ.23: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಎ.23ರಂದು ಬೆಳಗ್ಗೆ ಕೋಟೇಶ್ವರ ನಾಗಬನ ಕಟ್ಟೆ ಸಮೀಪ ಶ್ರೀಕಾಳಿಕಾಂಬಾ ಜುವೇಲ್ಲರಿ ಎದುರು ನಡೆದಿದೆ.
ಮೃತರನ್ನು ಅರುಣ್(34) ಎಂದು ಗುರುತಿಸಲಾಗಿದೆ. ಸಹಸವಾರ ಸುಧಾಕರ (29) ಎಂಬವರು ಗಾಯ ಗೊಂಡಿದ್ದಾರೆ. ಇವರಿಬ್ಬರು ಬೈಕಿನಲ್ಲಿ ಬೀಜಾಡಿ ವೈ ಜಂಕ್ಷನ್ ಕಡೆಯಿಂದ ಕೋಟೇಶ್ವರ ಪೇಟೆ ಕಡೆಗೆ ಬರುತ್ತಿರುವಾಗ ಸ್ಕೀಡ್ ಆಗಿ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅರುಣ್, ಕೋಟೇಶ್ವರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





