ಕುಂದಾಪುರ: ನೂತನ ನಿರೀಕ್ಷಣಾ ಮಂದಿರ ಕಾಮಗಾರಿಗೆ ಭೂಮಿ ಪೂಜೆ

ಕುಂದಾಪುರ, ಎ.24: ಸ್ವಾತಂತ್ರ್ಯ ಪೂರ್ವದಲ್ಲಿ 85 ವರ್ಷಗಳ ಹಿಂದೆ (1940ರ ಸುಮಾರಿಗೆ) ಕುಂದಾಪುರ ದಲ್ಲಿ ವಿಶಿಷ್ಟ ಮಾದರಿಯಲ್ಲಿ ನಿರ್ಮಾಣ ಗೊಂಡಿದ್ದ ನಿರೀಕ್ಷಣಾ ಮಂದಿರ (ಐಬಿ) ಬಹುತೇಕ ಶಿಥಿಲಗೊಂಡಿ ದ್ದರಿಂದ ಅದನ್ನು ಕೆಡವಿ ಬಹುಕಾಲದ ಬೇಡಿಕೆಯಂತೆ ಹೆಚ್ಚು ಕೊಠಡಿಗಳ ನೂತನ ಐಬಿ ನಿರ್ಮಾಣಕ್ಕೆ ಯೋಜನೆ ಸಿದ್ದಗೊಂಡಿದ್ದು ಕಾಮಗಾರಿಗೆ ಭೂಮಿ ಪೂಜೆ ಗುರುವಾರ ನಡೆಯಿತು.
ಕುಂದಾಪುರ ತಾಲೂಕು ಕೇಂದ್ರದಲ್ಲಿ ಪಂಚಗಂಗಾವಳಿ ನದಿ ತೀರದ ಅನತಿ ದೂರದಲ್ಲಿ 1940ರಲ್ಲಿ ನಿರ್ಮಿ ಸಿದ್ದ ಐಬಿಯನ್ನು ಕಳೆದ 20-25 ವರ್ಷಗಳ ಹಿಂದೆ ಮಾರ್ಪಾಟುಗೊಳಿಸಲಾಗಿದ್ದು ಕೆಲವಷ್ಟು ವರ್ಷಗಳಿಂದ ಅಲ್ಲಲ್ಲಿ ಶಿಥಿಲಗೊಂಡಿತ್ತು. ಅಲ್ಲದೆ ಕುಂದಾಪುರ ತಾಲೂಕು ಕೇಂದ್ರಕ್ಕೆ ಹೆಚ್ಚು ಕೊಠಡಿಯುಳ್ಳ ವಿಶಾಲವಾದ ಪ್ರವಾಸಿ ಬಂಗಲೆಯ ಅಗತ್ಯವಿದ್ದು ಈ ಬಗ್ಗೆ ಬೇಡಿಕೆಯೂ ಇತ್ತು.
ಕುಂದಾಪುರದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಮಂಜೂರಾಗಿದ್ದು ಮೊದಲ ಹಂತದಲ್ಲಿ ನೆಲ ಅಂತಸ್ತು (3 ಸಾಧಾರಣ ರೂಂ ಹಾಗೂ ಒಂದು ವಿಐಪಿ ರೂಮ್) ಪೂರ್ಣಗೊ ಳಿಸಿ, ಎರಡನೇ ಅಂತಸ್ತಿನ ಸ್ಟ್ರಕ್ಚರ್ (ರಚನೆ) ಸಿದ್ದಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಐಬಿ ಕಾಮಗಾರಿ ಗುತ್ತಿಗೆ ಪಡೆದ ಪಿಡಬ್ಲ್ಯೂಡಿ ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಮುಖಂಡರಾದ ಭಾಸ್ಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.





