ಉಡುಪಿ ಜಿಲ್ಲಾಧಿಕಾರಿ ಕ್ರಮ ಖಂಡನೀಯ: ದಿನಕರ ಬಾಬು

ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ, ಎ.25: ಉಡುಪಿ ಜಿಲ್ಲಾಧಿಕಾರಿ ಒಳ ಮೀಸಲಾತಿ ಕುರಿತ ಸಭೆಯನ್ನು ಕೇವಲ ಸೀಮಿತ ದಲಿತ ನಾಯಕರನ್ನು ಕರೆದು ಮಾಡಿರುವುದು ಇಡೀ ದಲಿತ ಸುಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಉಡುಪಿ ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು ಆರೋಪಿಸಿದ್ದಾರೆ.
ಇದರಿಂದ ಒಳ ಮೀಸಲಾತಿಯ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲು ಸಾಕಷ್ಟು ಬಾರಿ ಫೋನ್ ಕರೆ ಮಾಡಿದರು ಸ್ಪಂದಿಸುವ ಕೆಲಸ ಮಾಡಿಲ್ಲ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸರಿಯಾದ ಮಾಹಿತಿ ಕೊಡುತಿಲ್ಲ. ದಲಿತರಿಗೆ ವಂಚನೆ ಮಾಡುತಿರುವ ಜಿಲ್ಲಾಡಳಿತ ಕ್ರಮವನ್ನು ಖಂಡಿಸುತ್ತೇವೆ ಮತ್ತು ಇದರ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





