ಮಳೆ ನೀರು ಹರಿಯುವ ತೋಡಿಗೆ ಕಸಕಡ್ಡಿ ಹಾಕದಂತೆ ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಮನೆಯವರು ತೆಂಗಿನ ಗರಿ, ಸಿಪ್ಪೆ, ಕಸಕಡ್ಡಿ ಇತ್ಯಾದಿ ಗಳನ್ನು ಮಳೆ ನೀರು ಹರಿಯುವ ತೋಡಿನಲ್ಲಿ ಹಾಕುತ್ತಿರುವುದು ಕಂಡು ಬಂದಿದ್ದು, ಇದರಿಂದ ಮಳೆಗಾಲ ದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ನಗರದ ಅಲ್ಲಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಜನತೆ ತೆಂಗಿನ ಗರಿ, ಸಿಪ್ಪೆ, ಕಸಕಡ್ಡಿ ಇತ್ಯಾದಿಗಳನ್ನು ಮಳೆ ನೀರು ಹರಿಯುವ ತೋಡಿನಲ್ಲಿ ಹಾಕಿರುವುದನ್ನು ಕೂಡಲೇ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿ ಕೊಡಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಹರಿಯವ ತೋಡಿಗೆ ಕಸಕಡ್ಡಿ ಇತ್ಯಾದಿಗಳನ್ನು ಹಾಕುತ್ತಿ ರುವುದು ಕಂಡು ಬಂದಲ್ಲಿ ಹಾಗೂ ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಪೌರಸಭಾ ಅಧಿನಿಯಮದಡಿ ಸೂಕ್ತ ದಂಡ ವಿಧಿಸಿ, ಹಾಕಿದವರಿಂದಲೇ ಚರಂಡಿಯಲ್ಲಿರುವ ಕಸಕಡ್ಡಿಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





