‘ಶರ್ಮಾಜಿ ಔರ್ ಬೇಟಿ’ ಆಂಗ್ಲ ಕೃತಿ ಬಿಡುಗಡೆ

ಉಡುಪಿ, ಎ.26: ನಗರದ ಡಾ.ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಜನಾನುರಾಗಿಯಾಗಿದ್ದಖ್ಯಾತ ವೈದ್ಯರಾದ ಡಾ.ಎನ್.ಜಿ.ಕೆ. ಶರ್ಮಾ ಇವರ ಕುರಿತ ‘ಶರ್ಮಾ ಜಿ ಔರ್ ಬೇಟಿ’ ಆಂಗ್ಲ ಪುಸ್ತಕದ ಬಿಡುಗಡೆ ಇತ್ತೀಚೆಗೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು.
ಶರ್ಮಾರ ಪುತ್ರಿ ರಾಧಿಕಾ ಆಚಾರ್ಯ ಬರೆದ ಪುಸ್ತಕವನ್ನು ಬೆಂಗಳೂರಿನ ಹಿರಿಯ ಪತ್ರಕರ್ತೆ ವಸಂತಿ ಹರಿಪ್ರಕಾಶ್ ಬಿಡುಗಡೆಗೊಳಿಸಿದರು. ಉಡುಪಿ ಬಳಕೆದಾರರ ವೇದಿಕೆಯ ವಿಶ್ವಸ್ಥರಾದ ಹಿರಿಯ ಸಾಹಿತಿ ಶಾಂತರಾಜ್ ಐತಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃತಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಎನ್. ಜಿ. ಕೆ. ಶರ್ಮಾ ಮತ್ತು ಅವರ ಪತ್ನಿ ಸರೋಜಿನಿ ಶರ್ಮಾ ಉಪಸ್ಥಿತರಿದ್ದರು.
ಸುರೇಖಾ ಪುರಾಣಿಕ್ ಅತಿಥಿಗಳನ್ನು ಪರಿಚಯಿಸಿದರೆ, ರಾಮಚಂದ್ರ ಆಚಾರ್ಯ ಎಲ್ಲರನ್ನು ಸ್ವಾಗತಿಸಿ ದರು. ಅನಂತರಾವ್ ಕಾರ್ಯಕ್ರಮ ನಿರ್ವಹಿಸಿ ರಾಧಿಕಾ ಆಚಾರ್ಯ ವಂದಿಸಿದರು.
Next Story





