ಕೊಲ್ಲೂರು ಕೊರಗ ಮಹಿಳೆಯ ಮನೆ ಧ್ವಂಸ ಪ್ರಕರಣ: ಶ್ರೀಜಗದಂಭಾ ಸೇವಾ ಟ್ರಸ್ಟ್ ವಿರುದ್ಧ ಪ್ರಕರಣ ದಾಖಲು

ಕೊಲ್ಲೂರು: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಕೊರಗ ಸಮುದಾಯದ ಮಹಿಳೆ ಗಂಗೆ(59) ಎಂಬವರ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಶ್ರೀಜಗದಂಭಾ ಸೇವಾ ಟ್ರಸ್ಟ್ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೆ ಕಳೆದ 40 ವರ್ಷಗಳಿಂದ ಕಲ್ಯಾಣಿಗುಡ್ಡೆಯಲ್ಲಿ ವಾಸವಾಗಿದ್ದು, ಜಾಗದ ಹಕ್ಕುಪತ್ರ ಕೊರಿಕೊಂಡು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ತನಿಖಾ ಹಂತದಲ್ಲಿತ್ತು. ಈ ಮಧ್ಯೆ ಎ.17ರಂದು ಶ್ರೀ ಜಗದಂಭಾ ಸೇವಾ ಟ್ರಸ್ಟ್ ಕೊಲ್ಲೂರು ಇದರ ಅಧ್ಯಕ್ಷ ಪರಮೇಶ್ವರ ಅಡಿಗ ಮತ್ತು ಟ್ರಸ್ಟ್‌ನ ಪದಾಧಿಕಾರಿ ಗಳು ಗಂಗೆ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದರು.
ಪರಮೇಶ್ವರ ಅಡಿಗ ಮನೆಯಲ್ಲಿದ್ದ ಗಂಗೆ ಅವರ ಮಗ ಸಂತೋಷ್ ಅವರಲ್ಲಿ ನ್ಯಾಯಾಲಯದ ಆದೇಶ ದಂತೆ ಮನೆ ಮತ್ತು ಜಾಗದಿಂದ ನಿಮ್ಮನ್ನು ಹೊರ ಹಾಕಲು ಬಂದಿದ್ದೇವೆ, ಇದಕ್ಕೆ ನೀವು ಅಡ್ಡಿ ಪಡಿಸು ವಂತಿಲ್ಲ ಎಂದಿದ್ದರು. ನಿನ್ನ ತಾಯಿ ಎಲ್ಲಿ ಎಂದು ಕೇಳಿದಾಗ ಸಂತೋಷ ಪೇಟೆಯಲ್ಲಿದ್ದ ಗಂಗೆ ಅವರಲ್ಲಿ ವಿಚಾರ ಹೇಳಿದ್ದು, ಗಂಗೆ ಮನೆಗೆ ಬಂದಾಗ ಪರಮೇಶ್ವರ ಅಡಿಗ ಮತ್ತು ಟ್ರಸ್ಟ್‌ನ ಪದಾಧಿಕಾರಿಗಳು, ಪರಿಚಯವಿಲ್ಲದ ಅಧಿಕಾರಿಗಳ ಹಾಗೇ ಕಾಣುವ ವ್ಯಕ್ತಿಗಳು ಹಾಗೂ ಸಮವಸ್ತ್ರದಲ್ಲಿದ್ದ ಪೊಲೀಸರು ಇದ್ದರು. ಅಧಿಕಾರಿಗಳು ಪೊಲೀಸರು ಸ್ಥಳದಿಂದ ಹೋದ ಬಳಿಕ ಪರಮೇಶ್ವರ ಅಡಿಗರವರ ಸೂಚನೆಯಂತೆ ಜಿಸಿಬಿ ಯಂತ್ರದ ಮೂಲಕ ಮನೆಯನ್ನು ದ್ವಂಸ ಮಾಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







