ಎಸೆಸೆಲ್ಸಿ ಪರೀಕ್ಷೆ: ಮೂಳೂರು ಅಲ್ ಇಹ್ಸಾನ್ ಉತ್ತಮ ಫಲಿತಾಂಶ

ಕಾಪು, ಮೇ 2: ಡಿಕೆಎಸ್‌ಸಿ ಅಧೀನ ಸಂಸ್ಥೆಯಾಗಿರುವ ಮೂಳೂರು ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ 152 ವಿದ್ಯಾರ್ಥಿಗಳ ಪೈಕಿ 145 ಮಂದಿ ಉತ್ತೀರ್ಣರಾಗುವ ಮೂಲಕ ಶೇ.95.3 ಫಲಿತಾಂಶ ಪಡೆದಿದೆ. ಇದರಲ್ಲಿ ಒಟ್ಟು 39 ವಿಶಿಷ್ಟ ಶ್ರೇಣಿಯಲ್ಲಿ, 81 ಪ್ರಥಮ ಶ್ರೇಣಿಯಲ್ಲಿ, 25 ವಿದ್ಯಾರ್ಥಿ ಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಫಾತಿಮಾ ಶಿಫಾ 606(ಶೇ.97) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
Next Story





