ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬ್ರಹ್ಮಾವರ, ಮೇ 3: ಬಿಪಿ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತಿದ್ದ ಆರೂರಿನ ಸುಧಾಕರ (66) ಎಂಬವರ ಮೃತದೇಹ ಶುಕ್ರವಾರ ಸಂಜೆ ವೇಳೆ ಮನೆಯ ಸಮೀಪ ಇರುವ ಮಡಿ ಹೊಳೆಯಲ್ಲಿ ಪತ್ತೆಯಾ ಗಿದೆ. ಅವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಯ ನೀರಿಗೆ ಹಾರಿ ಮೃತಪಟ್ಟಿರಬೇಕೆಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಅಪರಾಹ್ನ 2ಗಂಟೆಯ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋಗಿದ್ದ ಸುಧಾಕರ್ ಗಾಗಿ ಹುಡುಕಾಡಿದಾಗ ಅವರು ಬಳಸುತಿದ್ದ ಊರುಗೋಲು ಹೊಳೆಯ ದಡದಲ್ಲಿ ಪತ್ತೆಯಾಗಿತ್ತು. ನೀರಿಗೆ ಬಿದ್ದಿರಬೇಕೆಂಬ ಸಂಶಯದಿಂದ ಹೊಳೆಯ ನೀರಿನಲ್ಲಿ ಹುಡುಕಾಡಿದಾಗ ಸಂಜೆ 6:30ರ ಸುಮಾರಿಗೆ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





