ಕಲಾಮಯಂ ಸಾಂಸ್ಕೃತಿಕ ಸಂಘಟನೆ ಉದ್ಘಾಟನೆ

ಉಡುಪಿ, ಮೇ 4: ಉಡುಪಿ ಜಿಲ್ಲೆಯಂತಹ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿರುವ ನಾಡಿನಲ್ಲಿ ಜಾನಪದ, ಸಾಂಸ್ಕೃತಿಕ ತಂಡಗಳಿಗೆ ಉತ್ತಮ ಭವಿಷ್ಯವಿದೆ. ಯಾವುದೇ ಜಾನಪದ ಕಲೆಗಳಾಗಿರಲಿ, ಅವುಗಳ ಬಗ್ಗೆ ಕೀಳರಿಮೆ ಇಲ್ಲದೆ ಕಲಾವಿದರು ಸಂಘಟಿತರಾಗಿ ಬೆಳೆದರೆ, ನಾಡಿನ ಜಾನಪದೀಯ ಕಲೆಗಳ ಉಳವಿಗೂ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಮಣಿಪಾಲದ ವಿ.ಪಿ.ನಗರದ ತಸ್ವ ಕಟ್ಟಡದ 2ನೇ ಮಹಡಿಯಲ್ಲಿ ಯುವ ಜಾನಪದ ಕಲಾವಿದ ಹೇಮಂತ್ ಅವರು ಹುಟ್ಟುಹಾಕಿರುವ ‘ಕಲಾಮಯಂ’ ಸಂಘಟನೆಯ ನೂತನ ಕಚೇರಿಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಕಲಾಮಯಂ ಸಂಘಟನೆಯ ಸಂಸ್ಥಾಪಕ ಹೇಮಂತ್, ಮುಖ್ಯ ಅತಿಥಿಗಳಾಗಿ ಪ್ರಕಾಶ್ ಮೂಡಿತ್ತಾಯ ಸುಳ್ಯ, ವಿದುಷಿ ಅದಿತಿ ಭಟ್, ವಿದುಷಿ ಶ್ರೀಕಲ್ಯಾಣಿ, ಬಿ.ಆನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.
Next Story





