ಕುಂದಾಪುರ: ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಕುಂದಾಪುರ, ಮೇ 4: ಕುಂದಾಪುರ ಶಾಸ್ತ್ರೀ ಪಾರ್ಕ್ ಪ್ಲೈ ಓವರ್ ಕೆಳಗಡೆ ಸುಮಾರು 40 ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಮೇ 4ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರು ಗೋಧಿ ಮೈ ಬಣ್ಣದ ಸುಮಾರು 5.5 ಅಡಿ ಎತ್ತರವಿದ್ದು, ಕಪ್ಪು ಬಣ್ಣದ ಅರ್ಧ ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಬರ್ಮುಡ ಚಡ್ಡಿ ಧರಿಸಿದ್ದಾರೆ. ಮುಖದಲ್ಲಿ ಕುರುಚಲು ಗಡ್ಡ ಮೀಸೆ ಇದೆ. ಈ ವ್ಯಕ್ತಿಯು ಎಲ್ಲಿಂದಲೋ ಕೂಲಿ ಕೆಲಸಕ್ಕೆ ಬಂದಿರುವಂತೆ ಕಂಡುಬರುತ್ತದೆ, ಈ ವ್ಯಕ್ತಿಯು ಯಾವುದೋ ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸ ಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





