ಹೆಬ್ರಿ ಗೋಪಾಲ ಭಂಡಾರಿ ಸಂಸ್ಮರಣಾ ಗ್ರಂಥಕ್ಕೆ ಲೇಖನಗಳ ಆಹ್ವಾನ

ಹೆಬ್ರಿ: ಕಾರ್ಕಳ ಕ್ಷೇತ್ರದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ ಶಿಲಾಪುತ್ಥಳಿ ಪ್ರತಿಷ್ಠಾಪನೆ ಮತ್ತು ಸಂಸ್ಮರಣಾ ಗ್ರಂಥದ ಸಮರ್ಪಣಾ ಕಾರ್ಯಕ್ರಮ ಮುಂದಿನ ಜುಲೈ 7ರಂದು ಅವರ ಜನ್ಮದಿನ ದಂದು ನಡೆಯಲಿದೆ.
ಶಾಸಕರಾಗಿದ್ದ ಗೋಪಾಲ ಭಂಡಾರಿ ಅವರ ಜೀವನ, ರಾಜಕೀಯ ಮತ್ತು ಸಾಮಾಜಿಕ ಮನೋಧರ್ಮ ವನ್ನು ಬಲ್ಲವರು ತಮ್ಮ ಅಭಿಪ್ರಾಯ ಲೇಖನಗಳನ್ನು 2 ಪುಟಗಳಿಗೆ ಮೀರದಂತೆ ಇದೇ ಮೇ 31ರ ಒಳಗೆ ಕಳುಹಿಸಿ ಕೊಡುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆ ವಿನಂತಿಸಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ಸ್ಮರಣಸಂಚಿಕೆ ಪ್ರಧಾನ ಸಂಪಾದಕರಾದ ಪ್ರಕಾಶ ಪೂಜಾರಿ ಮಾತಿಬೆಟ್ಟು (ಮೊ:9483931395) ಇವರನ್ನು ಸಂಪರ್ಕಿಸಬಹುದು. ಅಂಚೆವಿಳಾಸ : ನೀರೆ ಕೃಷ್ಣ ಶೆಟ್ಟಿ, ಅಧ್ಯಕ್ಷರು, ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆ, ಹುತ್ತುರ್ಕೆ, ಅಂಚೆ :ಹೆಬ್ರಿ - 576112, ಹೆಬ್ರಿ ತಾಲೂಕು.
Next Story





