ಕಾಂಗ್ರೆಸ್ ಪ್ರಚಾರ ಸಮಿತಿಯ ಕಾರ್ಯಾಗಾರ

ಉಡುಪಿ, ಮೇ 7: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಗಾರ ಇತ್ತೀಚೆಗೆ ಬೆಂಗಳೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯಕುಮಾರ ಸೊರಕೆ ಅಲ್ಲದೇ ಕೆಪಿಸಿಸಿ ಸದಸ್ಯ ದಿನೇಶ ಪುತ್ರನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಹರೀಶ್ ಕಿಣಿ, ಸದಸ್ಯರಾದ ಶ್ರೀದರ್ ಪಿ.ಎಸ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಯೋಜಕರಾದ ಗಣೇಶ್‌ರಾಜ್ ಸರಳೇಬೆಟ್ಟು, ಶಬರೀಶ್ ಸುವರ್ಣ, ಸತೀಶ್ ಪೂಜಾರಿ, ಮುರಳಿ ಭಟ್, ದಿನಕರ ಶೆಟ್ಟಿ ಪಳ್ಳಿ, ಶೇಖರ ಪೂಜಾರಿ, ಜಯ ಶೇರಿಗಾರ್, ಅಶೋಕ್ ಶೇರಿಗಾರ್ ಕಾರ್ಯಗಾರದಲ್ಲಿ ಭಾಗವಹಿಸಿದರು.
ರಾಜ್ಯಾದ್ಯಂತದಿಂದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Next Story





