Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್...

ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಣೆಗೆ ಚಾಲನೆ: ಭಾರತೀಯ ರೈಲ್ವೆಯಿಂದ ಅನುಮತಿ

ವಾರದೊಳಗೆ ಕಾಮಗಾರಿ ಪೂರ್ಣ

ವಾರ್ತಾಭಾರತಿವಾರ್ತಾಭಾರತಿ12 May 2025 6:33 PM IST
share
ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಣೆಗೆ ಚಾಲನೆ: ಭಾರತೀಯ ರೈಲ್ವೆಯಿಂದ ಅನುಮತಿ

ಉಡುಪಿ : ಏಳು ವರ್ಷಗಳ ಹಿಂದೆ ಆರಂಭವಾದ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಸೇತುವೆ ಕಾಮಗಾರಿಯು ಕುಂಟುತ್ತ ಸಾಗುತ್ತಿದ್ದು, ಇಂದು ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಭಾರತೀಯ ರೈಲ್ವೆ ನೀಡಿದ ಅನುಮತಿಯಂತೆ 450ಮೆಟ್ರಿಕ್ ಟನ್ ತೂಕದ ಸುಮಾರು 60 ಮೀಟರ್ ಉದ್ದದ ಈ ಗರ್ಡರ್‌ನ್ನು ಹಳಿಯ ಮಧ್ಯೆ ನಿರ್ಮಿಸಲಾದ ಪಿಲ್ಲರ್‌ಗೆ ಜೋಡಿಸುವ ಕಾರ್ಯ ಬೆಳಗ್ಗೆ ಆರಂಭಿಸ ಲಾಯಿತು. ರೈಲು ಸಂಚರಿಸದ ಬೆಳಗ್ಗೆ 11.30ರಿಂದ 1.45ರ ಮಧ್ಯಾವಧಿಯಲ್ಲಿ ಇದಕ್ಕೆ ವೇಗ ನೀಡಲಾ ಯಿತು. ಮಧ್ಯಾಹ್ನದ ರೈಲು ಸಂಚರಿಸಿದ ಬಳಿಕ ಮತ್ತೆ ಅಳವಡಿಕೆ ಕಾರ್ಯ ಮುಂದುವರೆಸಲಾಯಿತು.

20 ನಿಮಿಷಕ್ಕೆ 2.4ಮೀಟರ್‌ನಷ್ಟು ಮುಂದಕ್ಕೆ ದೂಡಲ್ಪಡುವ ಈ ಗರ್ಡರ್ ಸಂಜೆಯೊಳಗೆ ಸಂಪೂರ್ಣ ವಾಗಿ ಇನ್ನೊಂದು ತುದಿಯನ್ನು ತಲುಪುವ ಸಾಧ್ಯತೆ ಇದೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಒಳಗೆ ಪೂರ್ಣಗೊಳಿ ಸುವ ಭರವಸೆಯನ್ನು ರೈಲ್ವೆ ಇಂಜಿನಿಯರ್ ಗೋಪಾಲಕೃಷ್ಣ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಇಂಜಿನಿಯರ್ ಮಂಜುನಾಥ್ ನೀಡಿದ್ದಾರೆ.

ಎರಡು ಪಿಲ್ಲರ್‌ಗಳಲ್ಲಿ ಗರ್ಡರ್ ಜೋಡಣೆ ಮಾಡಿದ ಬಳಿಕ, ಅದಕ್ಕೆ ಆಧಾರವಾಗಿ ಇರಿಸಲಾದ ಕ್ರಿಬ್ಸ್‌ ಗಳನ್ನು ತೆಗೆಯಲಾಗುತ್ತದೆ. ಅದಕ್ಕಾಗಿ ಮತ್ತೆ ಗರ್ಡರ್‌ನ್ನು ಒಂದು ಮೀಟರ್‌ನಷ್ಟು ಮೇಲಕ್ಕೆತ್ತಲಾಗು ವುದು. ಬಳಿಕ ಮುಂದೆ ರಸ್ತೆ ಕಾಮಗಾರಿ ಆರಂಭಿಸಿ ಶೀಘ್ರ ವಾಹನ ಸಂಚಾರಕ್ಕೆ ಮುಕ್ತ ಮಾಡಿ ಕೊಡಲಾ ಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಇಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.

ಸಂಸದ ಕೋಟ ಭೇಟಿ: ಇಂದ್ರಾಳಿ ಸೇತುವೆ ಕಾಮಗಾರಿ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಗರ್ಡರ್ ಅಳವಡಿಕೆ ಕಾರ್ಯವನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದ್ರಾಳಿ ರೈಲ್ವೆ ಸೇತುವೆ ಬಹಳ ವರ್ಷಗಳಿಂದ ನನಗುದಿಗೆ ಬಿದ್ದಿತ್ತು. ಏಳೆಂಟು ತಿಂಗಳುಗಳಿಂದ ಇದಕ್ಕೆ ಅಧಿಕೃತ ವೇಗ ಸಿಕ್ಕಿತ್ತು. ಗರ್ಡರ್ ಪೂರ್ಣ ಸಿದ್ಧ ವಾಗಿ, ಜೋಡಣೆಗೆ ಭಾರತೀಯ ರೈಲ್ವೆಯಿಂದ ಅನುಮತಿ ಬೇಕಾಗಿತ್ತು. ಈ ಸಂಬಂಧ ಲಕ್ನೋದಿಂದ ಬಂದ ಆರ್‌ಡಿಎಸ್‌ಓ ಸ್ಥಳ ತನಿಖೆ ಮಾಡಿ ಗರ್ಡರ್‌ಗೆ ಹೆಚ್ಚುವರಿ ವೆಲ್ಡಿಂಗ್ ಮಾಡುವಂತೆ ಅವಶ್ಯಕತೆ ಯನ್ನು ವಿವರಿಸಿ ಜೋಡಣೆಗೆ ಅನುಮತಿ ನೀಡಿದ್ದಾರೆ ಎಂದರು.

ಬೆಳಗ್ಗೆ 11.30ಯಿಂದ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಗರ್ಡರ್ ಜೋಡಣೆಗೆ ಅನುಮತಿ ನೀಡ ಲಾಗಿದೆ. ಆ ನಂತರ ಹಂತಹಂತವಾಗಿ ಮುಂದು ವರೆಸಲಾಗುವುದು. ನಾಳೆ ಬೆಳಗ್ಗೆಯ ಒಳಗೆ ಅಂತಿಮ ರೂಪ ತಲುಪಿ ಇನ್ನೊಂದು ತುದಿಯನ್ನು ತಲುಪುತ್ತದೆ. ಅಲ್ಲಿಂದ ಕಾಮಗಾರಿಗೆ ಇನ್ನಷ್ಟು ವೇಗ ದೊರೆಯು ತ್ತದೆ. ಇದೀಗ ಕೊನೆಯ ಹಂತಕ್ಕೆ ಬಂದಿದ್ದು, ಗರ್ಡರ್ ಸಂಪೂರ್ಣ ಅಳವಡಿಸುವ ಕಾರ್ಯಕ್ಕೆ ಎಂಟು ದಿನ ಗಳು ಬೇಕಾಗುತ್ತದೆ. ಮುಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತದೆ. ಆದಷ್ಟು ಬೇಗ ಈ ಕಾರ್ಯ ಮಾಡ ಲಾಗುವುದು ಎಂದು ಸಂಸದರು ತಿಳಿಸಿದರು.

ಈ ಸಂದರ್ಭ ನಗರಸಭೆ ಸದಸ್ಯರಾದ ಗಿರೀಶ್ ಅಂಚನ್, ಅಶೋಕ್ ನಾಯಕ್, ಬಿಜೆಪಿ ಮುಖಂಡ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ತಿಂಗಳೊಳಗೆ ಕಟಪಾಡಿ ಅಂಡರ್‌ಪಾಸ್ ಕಾಮಗಾರಿ ಆರಂಭ

ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಹಾಗೂ ಸಂತೆಕಟ್ಟೆಯಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಿವು ರುವುದರಿಂದ ಈ ಮಧ್ಯೆ ಕಟಪಾಡಿ ಯಲ್ಲೂ ಕಾಮಗಾರಿಗೆ ಕೈಗೆತ್ತಿಕೊಂಡರೆ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತದೆ. ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಒಂದು ತಿಂಗಳೊಳಗೆ ಮುಗಿಯುವ ನಿರೀಕ್ಷೆ ಇದೆ. ಆ ಕೂಡಲೇ ಕಟಪಾಡಿ ಅಂಡರ್‌ಪಾಸ್ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕರಾವಳಿ ಬೈಪಾಸ್- ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಏಕಾಏಕಿ ಕಟ್ಟಡ ತೆರವುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ಹಂತದ ಭೂಸ್ವಾಧೀನಕ್ಕೆ ಈಗಾಗಲೇ ಪರಿಹಾರ ನೀಡಲಾಗಿದೆ. 24 ಮಂದಿಯ ಖಾತೆಗೆ ಇಂದು ಪರಿಹಾರ ಹಣ ಬರುತ್ತದೆ. ಇನ್ನು ಉಳಿದವರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಬಂದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯವರಿಗೆ ತಿಳಿಸಿದ್ದೇನೆ. ಅದಕ್ಕೆ ಪರಿಹಾರ ಸಿಗದ ಮಾಲಕರು ಜಿಲ್ಲಾಧಿಕಾರಿ ಅಥವಾ ರಾಷ್ಟ್ರೀಯ ಹೆದ್ದಾರಿಯವರು ಲಿಖಿತವಾಗಿ ನೀಡಿದರೆ ಜಾಗವನ್ನು ಬಿಟ್ಟು ಕೊಡುವು ದಾಗಿ ಒಪ್ಪಿದ್ದಾರೆ. ಈ ಮಧ್ಯೆ ತೆರವು ಕಾರ್ಯಾಚರಣೆಯಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಅವರಿಗೆ ನೋವಾದರೆ ಕ್ಷಮೆ ಕೋರುತ್ತೇನೆ. ಆದರೆ ಕಾಮಗಾರಿ ಮುಂದುವರೆಸುವುದು ಅನಿವಾ ರ್ಯವಾಗಿದೆ ಎಂದು ಅವರು ತಿಳಿಸಿದರು.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X