ಬೈಕ್-ಸ್ಕೂಟರ್ ಢಿಕ್ಕಿ: ಓರ್ವ ಸವಾರ ಮೃತ್ಯು

ಕಾರ್ಕಳ, ಮೇ 14: ಬೈಕ್ ಹಾಗೂ ಸ್ಕೂಟರ್ ಮಧ್ಯೆ ನಿಟ್ಟೆ ಗ್ರಾಮದ ಬೆರಂದೊಟ್ಟು ಕ್ರಾಸ್ ಸಮೀಪ ಮೇ 13ರಂದು ಸಂಜೆ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸ್ಕೂಟರ್ ಸವಾರ ರಮೇಶ್ ಎಂದು ಗುರುತಿಸಲಾಗಿದೆ. ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬೈಕ್, ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸವಾರ ರಮೇಶ ಹಾಗೂ ಬೈಕ್ ಸವಾರ ಶ್ರೇಯಾನ್ ವಾಹನ ಗಳೊಂದಿಗೆ ರಸ್ತೆಗೆ ಬಿದ್ದು ಗಾಯಗೊಂಡರು.
ಇದರಲ್ಲಿ ಗಂಭೀರವಾಗಿ ಗಾಯಗೊಂಡ ರಮೇಶ್ ಎನ್. ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story