ಬಂಟಕಲ್ಲು ದೇವಳದಲ್ಲಿ ಸೈನಿಕರಿಗಾಗಿ ವಿಶೇಷ ಪೂಜೆ

ಶಿರ್ವ: ಆಪರೇಷನ್ ಸಿಂಧೂರ ಭಯೋತ್ಪಾದಕರ ವಿರುದ್ಧ ಭಾರತದ ವಿಜಯಕ್ಕಾಗಿ ಮತ್ತು ವೀರ ಸೈನಿಕರ ಸ್ಥೈರ್ಯ ತುಂಬುವ ಸಲುವಾಗಿ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವೀ ಸನ್ನಿಧಿಯಲ್ಲಿ ಶ್ರೀದುರ್ಗಾಪೂಜೆ ಹಾಗೂ ಸುಹಾಸಿನಿ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ಧಾರ್ಮಿಕ ಅನುಷ್ಠಾನಗಳು ಜರಗಿದವು.
ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ನರೇಶ್ ಭಟ್, ಮಂಜುನಾಥ್ ಭಟ್ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ಅನುಷ್ಠಾನಗಳು ಜರುಗಿದವು. ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ದಂಪತಿ ಪೂಜಾನುಷ್ಠಾನದಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಸಮಿತಿ ಸದಸ್ಯರಾದ ಸತ್ಯನಾರಾಯಣ ನಾಯಕ್, ಸುರೇಂದ್ರ ನಾಯಕ್, ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗೋಪಿನಾಥ್ ನಾಯಕ್ ಪಳ್ಳಿ ಉಪಸ್ಥಿತರಿದ್ದರು.
Next Story





