ಉಡುಪಿ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್‌ನಲ್ಲಿ ವಿಶ್ವ ವಜ್ರ- ಡೈಮಂಡ್ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಮೇ 15: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್‌ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶೋರೂಂನಲ್ಲಿ ಮೇ 31ರವರೆಗೆ ಹಮ್ಮಿಕೊಳ್ಳಲಾದ ವಿಶ್ವ ವಜ್ರ- ಡೈಮಂಡ್ ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಯಿತು.
ಪ್ರದರ್ಶನವನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರತ್ನಾಕರ್ ಹಾಗೂ ನೇತ್ರಾ ಆರ್.ಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ರತ್ನಾಕರ್, ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನಲ್ಲಿ ಚಿನ್ನಾಭರಣ ಹಾಗೂ ಡೈಮಂಡ್ ಕೈಗೆಟಗುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ. ಇಲ್ಲಿನ ಗ್ರಾಹಕ ಸ್ನೇಹಿ ಸಿಬ್ಬಂದಿಗಳಿಂದಾಗಿ ಸಂಸ್ಥೆಯು ಜನರಿಗೆ ಸಾಕಷ್ಟು ಹತ್ತಿರವಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರತ್ನಾಕರ್ ಹಾಗೂ ನೇತ್ರಾ ಆರ್.ಕೆ ಬೆಲ್ಜಿಯಂ ಕಲೆಕ್ಷನ್, ಉಡುಪಿಯ ಉದ್ಯಮಿ ಪ್ರಭಾವತಿ ಶೆಟ್ಟಿ ಇಟಾಲಿಯನ್ ಕಲೆಕ್ಷನ್, ಹೂಡೆಯ ಅನಿಸಾ ಅಬೂಬಕ್ಕರ್ ಫ್ರೆಂಚ್ ಕಲೆಕ್ಷನ್, ಸಂಗೀತಾ ಪ್ರಕಾಶ್ ಶೆಟ್ಟಿ ಯು.ಎಸ್. ಕಲೆಕ್ಷನ್, ಮಲ್ಪೆಯ ಸಾರಾ ಹಸನ್ ಮಿಡ್ಲ್ ಈಸ್ಟ್ ಕಲೆಕ್ಷನ್ ಹಾಗೂ ಎಲ್‌ಐಸಿಯ ಸಹಾಯಕ ಆಡಳಿತ ಅಧಿಕಾರಿ ಕೆ.ಪಿ.ವಿದ್ಯಾಧರಿ ಸಿಂಗಾಪುರ ಕಲೆಕ್ಷನ್‌ನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಕೆ.ಪಿ.ವಿದ್ಯಾಧರಿ, ಸುಲ್ತಾನ್ ಉತ್ತಮ ಸೇವೆಗೆ ಹೆಸರು ವಾಸಿಯಾಗಿದೆ. ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆಯೇ ಖುಷಿ ಕೊಡುತ್ತದೆ. ಇದೇ ರೀತಿ ಈ ಸಂಸ್ಥೆಯಲ್ಲಿ ಸೇವೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮನೋಜ್ ಎಂ.ಎಸ್., ಸೇಲ್ಸ್ ಮೇನೆಜರ್ ಅಬ್ದುಲ್ ವಾಹಿದ್ ಪಿ.ಎಂ., ಸುಲ್ತಾನ್ ಗ್ರೂಪ್ ಉಡುಪಿ ಪ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಮಾರ್ಕೆಟಿಂಗ್ ಮೆನೇಜರ್ ರಿಫಾ ಆಗಾ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ ಡೈಮಂಡ್‌ಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಪ್ರದರ್ಶನದಲ್ಲಿ ಐಷರಾಮಿ ವಜ್ರಾಭರಣಗಳ ಸಂಗ್ರಹ, ಸಾಲಿಟೈರ್ ಕಲೆಕ್ಷನ್, ಸಾಂಪ್ರದಾಯಿಕ ಶೈಲಿಯ ವಜ್ರಾಭರಣಗಳು, ತನ್ಮನಿಯಾ ಕಲೆಕ್ಷನ್, ಬ್ರೈಡಲ್ ವಜ್ರಾಭರಣ ಕಲೆಕ್ಷನ್, ಅನ್ಕಟ್ ಡೈಮಂಡ್, ರುಬಿ ಎಮೆರಾಲ್ಡ್ ಜೆಮ್ ಸ್ಟೋನ್ ಕಲೆಕ್ಷನ್‌ಗಳ ಸಂಗ್ರಹ ಇವೆ. ಪ್ರತಿ ಡೈಮಂಡ್ ಕ್ಯಾರೆಟ್ ಮೇಲೆ 8000ರೂ. ರಿಯಾಯಿತಿ ನೀಡಲಾಗುವುದು ಎಂದು ಉಡುಪಿ ಬ್ರಾಂಚ್ ಮೆನೇಜರ್ ತಿಳಿಸಿದ್ದಾರೆ.







