ಸ್ಕೂಟರ್‌ನಿಂದ ಬಿದ್ದು ಮಹಿಳೆ ಮೃತ್ಯು

ಬ್ರಹ್ಮಾವರ: ಸ್ಕೂಟರ್‌ನಿಂದ ಬಿದ್ದು ಸಹಸವಾರೆಯೊಬ್ಬರು ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಕೆಜಿ ರೋಡ್ -ಪೆರ್ಡೂರು ರಸ್ತೆಯ ಅಮ್ಮುಂಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಅಮಿತಾ(45) ಎಂದು ಗುರುತಿಸಲಾಗಿದೆ. ಇವರು ಹಾಗೂ ಸವಾರ ಕಿಶೋರ್ ಸ್ಕೂಟರ್‌ನಲ್ಲಿ ಮೇ 12ರಂದು ಕೆಜಿ ರೋಡ್ ಕಡೆಯಿಂದ ಪೆರ್ಡೂರು ಕಡೆಗೆ ಹೋಗುತ್ತಿದ್ದು, ಈ ವೇಳೆ ಎದುರಿನಲ್ಲಿದ್ದ ಗೂಡ್ಸ್ ರಿಕ್ಷಾವನ್ನು ಕಂಡ ಕಿಶೋರ್ ಸ್ಕೂಟರ್‌ಗೆ ಒಮ್ಮೆಲೇ ಬ್ರೇಕ್ ಹಾಕಿದ ಎನ್ನಲಾಗಿದೆ.
ಇದರ ಪರಿಣಾಮ ಸ್ಕೂಟರ್ ಸ್ಕಿಡ್ ಬಿತ್ತು. ಇದರಿಂದ ಸಹಸವಾರೆ ಅಮಿತ ರಸ್ತೆಯ ಮೇಲೆ ಬಿದ್ದು ಗಂಭೀರ ವಾಗಿ ಗಾಯಗೊಂಡರು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮಿತಾ ಮೇ 14ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





