ತೋಟದ ಕೆಲಸಗಾರನಿಂದ ಹಣ ಕಳವು: ದೂರು ದಾಖಲು

ಕುಂದಾಪುರ, ಮೇ 15: ತೋಟ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ವ್ಯಕ್ತಿಯೊಬ್ಬರು ಮನೆಯ ಕಾಪಾಟಿನಲ್ಲಿದ್ದ ಹಣ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಸೌಕೂರು ಗ್ರಾಮದ ಸುಮಾವತಿ ಎಂಬವರ ಮನೆಯ ತೋಟದಲ್ಲಿ ಹಾವೇರಿ ಜಿಲ್ಲೆಯ ಸೋಮಾಪುರ ನಿವಾಸಿ ಮಂಜುನಾಥ ಕೋಡಿಹಳ್ಳಿ ಎಂಬಾತ ಕೆಲಸ ಮಾಡಿಕೊಂಡಿದ್ದನು. ಮನೆಮಂದಿ ಎಲ್ಲ ಮೇ 11ರಂದು ಮನೆಗೆ ಬೀಗ ಹಾಕಿ ಮದುವೆ ಮನೆಗೆ ಹೋಗಿದ್ದು, ಈ ವೇಳೆ ಮಂಜುನಾಥ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದನು.
ಸಂಜೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಮಂಜುನಾಥ ನಾಪತ್ತೆಯಾಗಿರುವುದು ಕಂಡುಬಂದಿದೆ. ನಂತರ ಕಪಾಟಿನಲ್ಲಿ ನೋಡುವಾಗ 60,000ರೂ. ನಗದು ಹಣ ಕಳವಾಗಿರುವುದು ತಿಳಿದುಬಂದಿತು. ಮಂಜುನಾಥ ಕೋಡಿಹಳ್ಳಿ ಮನೆಯ ಬಾಗಿಲಿನ ಬೀಗ ತೆಗೆದು ಕಪಾಟಿನಲ್ಲಿದ್ದ ಹಣ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





