ಎಸೆಸೆಲ್ಸಿ: ಚಂದ್ರನಗರ ಕ್ರೆಸೆಂಟ್ ಶಾಲೆಗೆ ಅಭಿನಂದನೆ

ಕಾಪು, ಮೇ 16: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಷನಲ್ ಶಾಲೆಗೆ ಮಸ್ಜಿದ್ ಈ ನೂರ್ ಜುಮ್ಮಾ ಮಸೀದಿ ಕೊರಂಟಿಕಟ್ಟೆ ಇದರ ಆಡಳಿತ ಸಮಿತಿ ನಿಯೋಗ ಭೇಟಿ ನೀಡಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಫಕ್ರುದ್ದೀನ್ ಅಲಿ, ಕಾರ್ಯದರ್ಶಿ ಇಮ್ರಾನ್ ಬಷೀರ್, ಉಪಾಧ್ಯಕ್ಷ ಮುಷ್ತಾಕ್ ಅಹ್ಮದ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
Next Story





