ಲೈಟ್‌ಹೌಸ್ ಕನ್ನಡ ಚಲನಚಿತ್ರ ಬಿಡುಗಡೆ

ಉಡುಪಿ: ಅಸ್ತ್ರ ಪ್ರೊಡಕ್ಷನ್ ಮತ್ತು ಅಮ್ಚೆ ಕ್ರಿಯೇಶನ್ ಇದರ ಬಹುನಿರೀಕ್ಷಿತ ಲೈಟ್ ಹೌಸ್ ಕನ್ನಡ ಚಲನಚಿತ್ರ ಬಿಡುಗಡೆ ಸಮಾರಂಭ ಉಡುಪಿಯ ಕಲ್ಪನಾ ಟಾಕೀಸ್ ಆವರಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಹರಿಪ್ರಸಾದ್ ರೈ ಉದ್ಘಾಟಿಸಿದರು. ನಗರಸಭಾ ಸದಸ್ಯ ವಿಜಯ ಕೊಡ ವೂರು, ಬಿಜೆಪಿ ನಾಯಕಿ ವೀಣಾ ಶೆಟ್ಟಿ ಮತ್ತು ಗೀತಾಂಜಲಿ ಸುವರ್ಣ, ಉದ್ಯಮಿ ಅಮೃತ್ ಶೆಣಿೈ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಶಿರ್ವ, ಉದ್ಯಮಿ ಶ್ರೀಕಾಂತ ನಾಯಕ್, ಲೇಖಕ ರಾಘವೇಂದ್ರ ಪ್ರಭು ಕರ್ವಾಲು, ಶಿಕ್ಷಕ ಕರುಣಾಕರ ಬಂಗೇರ ಉಪಸಿತರಿದ್ದರು.
ಚಿತ್ರದ ನಿರ್ಮಾಪಕ ದತ್ತಾತ್ರೇಯ ಪಾಟ್ಕರ್ ಬಂಟಕಲ್ಲು ಮತ್ತು ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಇತ್ತೀಚಿಗೆ ಚೆನ್ನೈಯಲ್ಲಿ ನಡೆದ ಚಲನಚಿತ್ರದಲ್ಲಿ ಪಡೆದ ಪ್ರಶಸ್ತಿಯನ್ನು ಅತಿಥಿಗಳಿಂದ ಪಡೆದುಕೊಂಡರು.
ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಚಿತ್ರದ ಕಲಾವಿದರು ಭಾಗವಹಿಸಿದ್ದರು.
Next Story





