ಪಾದೂರು ಗ್ರಾಮ ಸಹಾಯಕ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಾದೂರು ಗ್ರಾಮದ ಗ್ರಾಮ ಸಹಾಯಕ ಹುದ್ದೆಗೆ 25ರಿಂದ 45ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಮೊದಲು ಗ್ರಾಮಸಹಾಯಕರಾಗಿದ್ದು, ಸೇವೆಯಲ್ಲಿರುವಾಗಲೇ ಮರಣ ಹೊಂದಿದವರ ಕುಟುಂಬ ದವರಿಗೆ ಅನುಕಂಪದ ಆಧಾರದ ಮೇಲೆ ನಿಯಮಾನುಸಾರ ಗ್ರಾಮ ಸಹಾಯಕರ ಕೆಲಸ ನೀಡಲು ಆದ್ಯತೆ ನೀಡಲಾಗುವುದು. ಅರ್ಜಿದಾರರು ಅದೇ ಗ್ರಾಮದವರಾಗಿರಬೇಕು ಅಥವಾ ಅದೇ ಗ್ರಾಮದ ವರಿಂದ ಅರ್ಜಿ ಬಾರದಿದ್ದಲ್ಲಿ ನೆರೆಯ ಗ್ರಾಮದಿಂದ ಬಂದ ಅರ್ಜಿಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಯು ಓದು, ಬರಹ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಈ ಮೊದಲು ಸ್ಥಳೀಯ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಅನುಭವ ಇದ್ದಲ್ಲಿ ಖಾತರಿ ಪಡಿಸಿಕೊಂಡು ಅರ್ಹ ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸುವಾಗ ಎಲ್ಲಾ ಪ್ರಮಾಣಪತ್ರಗಳನ್ನು, ಅಂಕಪಟ್ಟಿಗಳನ್ನು, ವಯೋಮಿತಿ ಹಾಗೂ ವಿಧ್ಯಾಭ್ಯಾಸದ ಕುರಿತು ಶಾಲಾ ಪ್ರಮಾಣ ಪತ್ರವನ್ನು, ಇತ್ತೀಚೆಗೆ ಪಡೆದ ಜಾತಿ, ಆದಾಯ ದೃಢೀಕರಣ ಹಾಗೂ ಪಡಿತರ ಚೀಟಿ ನಕಲು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾಪು ತಾಲೂಕು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.







