ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

ಹೆಬ್ರಿ, ಮೇ 16: ಮಗಳ ಅನಾರೋಗ್ಯದ ಬಗ್ಗೆ ಮಾನಸಿಕವಾಗಿ ನೊಂದ ಆಶಾ(33) ಎಂಬವರು ಮೇ 15ರಂದು ಬೆಳಗ್ಗೆ ವರಂಗ ಗ್ರಾಮದ ಮುನಿಯಾಲು ಎಂಬಲ್ಲಿರುವ ತಾಯಿ ಮನೆಯ ಅಡುಗೆ ಕೋಣೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಸಂಸಾರದ ಜೀವನದಲ್ಲಿ ಉಂಟಾದ ಭಿನ್ನಾಪ್ರಾಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡ ಯಳಜಿತ ಗ್ರಾಮದ ಬಸವ(38) ಎಂಬವರು ಗುರುವನಕೋಟೆಯ ಅರಣ್ಯದಲ್ಲಿ ಮರಕ್ಕೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರು ಎ.17ರಂದು ಮನೆಯಿಂದ ನಾಪತ್ತೆಯಾಗಿದ್ದು, ಮೇ 15ರಂದು ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಹೇರೂರು ಗ್ರಾಮದ ಬಾಲಕೃಷ್ಣ ಎಂಬವರ ಪತ್ನಿ ಶಾರದಾ (55) ಎಂಬವರು ಮೇ 15ರಂದು ಸಂಜೆ ವೇಳೆ ತಮ್ಮ ಹಳೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





