ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ

ಉಡುಪಿ, ಮೇ 16: ಉಡುಪಿ ಜಿಲ್ಲೆಯ ಹಲವು ಕಡೆ ಇಂದು ಬೆಳಗ್ಗೆ ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ನಗರ, ಹೊರವಲಯ, ಕಾಪು, ಮಣಿಪಾಲ ಸೇರಿದಂತೆ ಹಲವು ಕಡೆ ಸಾದಾರಣ ಮಳೆಯಾದರೆ, ಬ್ರಹ್ಮಾವರ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗಿದೆ. ಬಳಿಕ ಮಳೆ ಕಡಿಮೆಯಾಗಿ, ನಂತರ ಮೋಡ ವಾತಾವರಣ ಮತ್ತು ಮಧ್ಯಾಹ್ನದ ಬಳಿಕ ಬಿಸಿಲಿನ ವಾತಾವರಣ ಕಂಡುಬಂದಿದೆ.
ಕಳೆದ 24ಗಂಟೆ ಅವಧಿಯಲ್ಲಿ ಕಾರ್ಕಳ 5.9ಮಿ.ಮೀ., ಕುಂದಾಪುರ 1.1ಮಿ.ಮೀ., ಉಡುಪಿ 2.3ಮಿ.ಮೀ., ಬೈಂದೂರು 1.3ಮಿ.ಮೀ., ಬ್ರಹ್ಮಾವರ 2.0ಮಿ.ಮೀ., ಕಾಪು 2.6ಮಿ.ಮೀ., ಹೆಬ್ರಿ 0.7 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 2.4ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
Next Story





