ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಕಾರ್ಕಳ: ಸಾಲ ಮರುಪಾವತಿಸಲು ಸಾಧ್ಯವಾಗದ ಚಿಂತೆಯಲ್ಲಿ ಜೀವನದಲ್ಲಿ ಮನನೊಂದ ಕಾರ್ಕಳ ಕೆ.ಇ.ಬಿ.ಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ನಿಟ್ಟೆ ನಿವಾಸಿ ನಿತ್ಯಾನಂದ(26) ಎಂಬವರು ಮೇ 17ರಂದು ಬೆಳಗ್ಗೆ ಮನೆ ಸಮೀಪದ ತಿರುಮಲಬೆಟ್ಟು ರಬ್ಬರ್ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಪತ್ನಿಯ ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ಹಳ್ಳಿಹೊಳೆ ಗ್ರಾಮದ ಅಡಿಗದ್ದೆ ನಿವಾಸಿ ರಮೇಶ್(59) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ 17ರಂದು ಸಂಜೆ ವೇಳೆ ಮನೆಯ ದನದ ಕೊಟ್ಟಿಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





