ಮನೆಗೆ ನುಗ್ಗಿ ಲಕ್ಷಾಂತ ರೂ. ಮೌಲ್ಯದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಕಾಪು, ಮೇ 19: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೇ 18ರಂದು ರಾತ್ರಿ ವೇಳೆ ಕಾಪುವಿನಲ್ಲಿ ನಡೆದಿದೆ.
ಕಾಪುವಿನ ಜಮೀಲಾಬಿ ಮನೆಯ ಬೀಗ ಹಾಕಿ, ಮಗನ ಮನೆಗೆ ಹೋಗಿದ್ದು, ಈ ವೇಳೆ ಮನೆಯ ಬಾಗಿಲು ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಬೆಡ್ ರೂಂನ ಕಪಾಟಿನಲ್ಲಿದ್ದ ಮುತ್ತಿನ ಹಾರ, ಬಳೆ, 4 ಉಂಗುರು ಗಳು, ಕಿವಿಯೋಲೆ, ಒಡೆಗೆ ಹಾಕುವ ಹೂ, 3 ಜೊತೆ ಕಿವಿಯ ಟಿಕ್ಕಿ, ಚಿಕ್ಕ ಚೈನ್, ಕಿವಿಯ ರಿಂಗ್ ಸೇರಿ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಮೌಲ್ಯ 3,84,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story